alex Certify ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…!

ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್​ ಬ್ರಿಡ್ಜ್​ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್​ ಬ್ರಿಡ್ಜ್​ನ ಉದ್ದೇಶ.

ಆದರೆ, ಚಾಲಕನೊಬ್ಬ ಆಟೋರಿಕ್ಷಾವನ್ನು ಬ್ಯುಸಿಯಾದ ಮುಂಬೈ-ಅಹಮದಾಬಾದ್​ ಹೆದ್ದಾರಿಯ ಮೇಲಿರುವ ಫುಟ್​ ಬ್ರಿಡ್ಜ್​ ಮೇಲೆ ಲೇನ್​ ದಾಟಲು ಓಡಿಸಿದ್ದಾನೆ, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಈ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿ ಇದನ್ನು ಮಿಷನ್​ ಇಂಪಾಸಿಬಲ್​ ಎಂದೂ ಕರೆದಿದ್ದಾರೆ.

ವಿಡಿಯೊದ ಪ್ರಕಾರ, ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯ ವಿರಾರ್​ನಲ್ಲಿ ಈ ಘಟನೆ ನಡೆದಿದೆ. ಚಾಲಕನನ್ನು ಹಿಡಿಯುವ ಪ್ರಯತ್ನ ನಡೆದಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಈ ವಿಡಿಯೊವು ಜನರಿಂದ ಸಾಕಷ್ಟು ಲೈಕ್​ ಪಡೆದುಕೊಂಡಿದೆ. ಅವರಲ್ಲಿ ಹಲವರು ಇದನ್ನು ಜನರು ಟ್ರಾಫಿಕ್​ ನಿಯಮಗಳನ್ನು ಅಪಾಯಕಾರಿ ರೀತಿಯಲ್ಲಿ ಉಲ್ಲಂಘಿಸುವ ಉದಾಹರಣೆ ಎಂದು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...