alex Certify ಫಡ್ನವೀಸ್ ಅವರನ್ನು ಭೇಟಿಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ ಸಂಸದ ಸಂಜಯ್ ರಾವತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಡ್ನವೀಸ್ ಅವರನ್ನು ಭೇಟಿಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ ಸಂಸದ ಸಂಜಯ್ ರಾವತ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಫೈರ್‌ಬ್ರಾಂಡ್ ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಹೊಗಳಿದ್ದು ಶೀಘ್ರದಲ್ಲೇ ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜಿ ಸ್ವರವನ್ನು ಎತ್ತಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ತರಾಟೆಗೆ ತೆಗೆದುಕೊಂಡು, ಮಹಾರಾಷ್ಟ್ರವನ್ನು ಶಿಂಧೆ ಅಲ್ಲ ಉಪ ಮುಖ್ಯಮಂತ್ರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಜಯ್ ರಾವತ್ ಅವರು ಇಂತಹ ರಾಜಕೀಯ ಸೇಡನ್ನು ಹಿಂದೆಂದೂ ಕೇಳಿರಲಿಲ್ಲ, ಅನುಭವಿಸಿರಲಿಲ್ಲ. ಆದರೂ ತಮಗೆ ಯಾರ ವಿರುದ್ಧವೂ ದ್ವೇಷವಿಲ್ಲ ಮತ್ತು ಕೇಂದ್ರ ಏಜೆನ್ಸಿಗಳನ್ನು ದೂಷಿಸುವುದಿಲ್ಲ ಎಂದು ಹೇಳಿದರು. ಕಳೆದ 100 ದಿನಗಳಲ್ಲಿ ಜೈಲಿನಲ್ಲಿ ತಾನು ಎದುರಿಸಿದ ಕಷ್ಟಗಳ ಬಗ್ಗೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ದೆಹಲಿಗೆ ಭೇಟಿ ನೀಡುವುದಾಗಿ ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದರು. ಈ ಮೂಲಕ ಅಚ್ಚರಿ ಹೇಳಿಕೆ ನೀಡಿದ ಅವರ ಮಾತುಗಳು ಅವರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಹೇಳಿಕೆಗಳಿಗೆ ವಿರುದ್ಧವಾಗಿ ತೋರುತ್ತಿವೆ.

ಕೇಂದ್ರೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಯಲ್ಲಿ ಕೈಗೊಂಬೆಗಳಾಗಿವೆ ಎಂದು ಗುರುವಾರ ಆರೋಪಿಸಿದ್ದ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ವಿರುದ್ಧವಾಗಿ ಸಂಜಯ್ ರಾವತ್ ಅವರ ಕಾಮೆಂಟ್ ಹುಬ್ಬೇರಿಸಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ನಾವು ವಿರೋಧಕ್ಕಾಗಿ ನಿರ್ಧಾರಗಳನ್ನು ವಿರೋಧಿಸುವುದಿಲ್ಲ. ಜನರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಯಾವುದು ಉತ್ತಮವೋ ಅದನ್ನು ಯಾವಾಗಲೂ ಸ್ವಾಗತಿಸಬೇಕು. ದೇವೇಂದ್ರ ಫಡ್ನವೀಸ್ ಅವರು ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ನಾನು ಜೈಲಿನಲ್ಲಿದ್ದಾಗ ಪತ್ರಿಕೆಗಳಲ್ಲಿ ಇದನ್ನು ಓದುತ್ತಿದ್ದೆ. ಬಡವರಿಗೆ ವಸತಿ ಮತ್ತು ವೃದ್ಧರಿಗೆ ಹಕ್ಕುಗಳನ್ನು ಒದಗಿಸುವ ನಿರ್ಧಾರಗಳನ್ನು ಅವರು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ನಾನು ಮುಂದಿನ 2-4 ದಿನಗಳಲ್ಲಿ ಫಡ್ನವೀಸ್ ಅವರನ್ನು ಭೇಟಿ ಮಾಡುತ್ತೇನೆ ಎಂದು ರಾವತ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...