alex Certify ಪ್ಲಾಸ್ಟಿಕ್‌ ಸ್ಟ್ರಾನಿಂದ ಜ್ಯೂಸ್‌, ಎಳನೀರು ಕುಡಿಯುತ್ತೀರಾ….? ನಿಮ್ಮ ಆರೋಗ್ಯಕ್ಕೆ ಆಗಬಹುದು ಇಷ್ಟೆಲ್ಲಾ ಹಾನಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್‌ ಸ್ಟ್ರಾನಿಂದ ಜ್ಯೂಸ್‌, ಎಳನೀರು ಕುಡಿಯುತ್ತೀರಾ….? ನಿಮ್ಮ ಆರೋಗ್ಯಕ್ಕೆ ಆಗಬಹುದು ಇಷ್ಟೆಲ್ಲಾ ಹಾನಿ…

ಸಾಮಾನ್ಯವಾಗಿ ನಾವು ಎಳನೀರು, ಜ್ಯೂಸ್‌, ಲಸ್ಸಿ ಎಲ್ಲವನ್ನೂ ಪ್ಲಾಸ್ಟಿಕ್‌ ಸ್ಟ್ರಾನಲ್ಲೇ ಕುಡಿಯುತ್ತೇವೆ. ಆದ್ರೆ ಈ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳುವುದು ಉತ್ತಮ. ಈ ಪ್ಲಾಸ್ಟಿಕ್‌ ಸ್ಟ್ರಾಗಳಲ್ಲಿ ಪಾನೀಯ ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯ ಕೆಡಬಹುದು, ಅದರ ಜೊತೆಗೆ ಚರ್ಮದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.

ತೂಕ ಹೆಚ್ಚಾಗುವುದು: ಜ್ಯೂಸ್‌, ಕೋಲ್ಡ್‌ ಕಾಫಿ ಎಲ್ಲವನ್ನೂ ಪ್ಲಾಸ್ಟ್ರಿಕ್‌ ಸ್ಟ್ರಾನಿಂದ ಕುಡಿಯುತ್ತಾರೆ. ಹೆಚ್ಚಿನ ಕ್ಯಾಲೋರಿ ಹೊಂದಿರುವ ತಂಪು ಪಾನೀಯದ ಸಣ್ಣ ಸಿಪ್‌ ಕೂಡ ನಿಮ್ಮ ತೂಕವನ್ನು ಹೆಚ್ಚಿಸಲು ಕಾರಣವಾಗಬಹುದು. ಯಾಕಂದ್ರೆ ಈ ರೀತಿ ಸ್ಟ್ರಾದಲ್ಲಿ ತಂಪು ಪಾನೀಯ ಕುಡಿಯುವುದರಿಂದ ನಿಮ್ಮ ಹಸಿವು ಹೆಚ್ಚುತ್ತದೆ.

ಹಲ್ಲುಗಳಲ್ಲಿ ಹುಳುಕು:  ಹಲ್ಲುಗಳಲ್ಲಿ ಹುಳುಕು, ಕುಳಿ ಬೀಳುವುದು ಮತ್ತು ಇತರ ಬಾಯಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಜಂಕ್ ಫುಡ್ ತಿನ್ನುವುದು ಮತ್ತು ತಂಪು ಪಾನೀಯಗಳನ್ನು ಕುಡಿಯುವುದರಿಂದ ಉಂಟಾಗುತ್ತವೆ. ನೀವು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಏನನ್ನಾದರೂ ಸೇವಿಸಿದಾಗ, ಅದು ನೇರವಾಗಿ ನಿಮ್ಮ ಹಲ್ಲು ಮತ್ತು ದಂತಕವಚವನ್ನು ಸ್ಪರ್ಶಿಸುತ್ತದೆ. ಇದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ.

ವಯಸ್ಸಾದ ಚಿಹ್ನೆಗಳು : ನೀವು ಪ್ಲಾಸ್ಟಿಕ್‌ ಸ್ಟ್ರಾ ಬಳಸಿ ಏನನ್ನಾದರೂ ಕುಡಿಯುವಾಗ ಪಾನೀಯವನ್ನು ನಿಮ್ಮ ತುಟಿಗಳಿಂದ ಪೌಟ್ ಮಾಡುತ್ತೀರ. ಈ ಚಟುವಟಿಕೆಯನ್ನು ಪುನರಾವರ್ತಿಸುವುದರಿಂದ ನಿಮ್ಮ ತುಟಿಗಳ ಸುತ್ತಲೂ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಮತ್ತು ಕಣ್ಣುಗಳ ಸುತ್ತಲೂ ಸುಕ್ಕುಗಳು ಉಂಟಾಗಬಹುದು.

ದೇಹದಲ್ಲಿ ರಾಸಾಯನಿಕಗಳ ಸೇರ್ಪಡೆ : ಪ್ಲಾಸ್ಟಿಕ್ ಸ್ಟ್ರಾಗಳನ್ನು ಪಾಲಿಪ್ರೊಪಿಲೀನ್‌ನಿಂದ ತಯಾರಿಸಲಾಗುತ್ತದೆ. ನೀವು ಸ್ಟ್ರಾಗಳಿಂದ ಪಾನೀಯಗಳನ್ನು ಸೇವಿಸಿದಾಗ, ಅದು ನೇರವಾಗಿ ನಿಮ್ಮ ದೇಹಕ್ಕೆ ಹೋಗುವ ಮೂಲಕ ನಿಮ್ಮ ದೇಹದ ಹಾರ್ಮೋನ್ ಮಟ್ಟವನ್ನು ಏರುಪೇರು ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...