alex Certify ‘ಪ್ಲಾಸ್ಟಿಕ್’​ ಬಳಕೆ ಕುರಿತಂತೆ ಸಮೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ಲಾಸ್ಟಿಕ್’​ ಬಳಕೆ ಕುರಿತಂತೆ ಸಮೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಮಾಹಿತಿ…!

ವಿಶ್ವದ್ಯಾಂತ ಪ್ರತಿ ನಾಲ್ವರಲ್ಲಿ ಮೂವರು ಒಂದೇ ಬಾರಿ ಬಳಕೆ ಮಾಡಿ ಬಿಸಾಡುವಂತಹ ಪ್ಲಾಸ್ಟಿಕ್​ ಬಳಕೆ ಮಾಡುವುದನ್ನು ಆದಷ್ಟು ಬೇಗ ನಿಲ್ಲಿಸಬೇಕಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಪ್ಲಾಸ್ಟಿಕ್​ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಜಾಗತಿಕ ಒಪ್ಪಂದವೊಂದನ್ನು ಕೈಗೊಳ್ಳುವ ಬಗ್ಗೆ ಮಾತುಕತೆಯನ್ನು ನಡೆಸಲು ತಯಾರಿ ನಡೆಸುತ್ತಿದೆ.

2015 ರಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದದ ನಂತರದ ಪ್ರಮುಖ ಪರಿಸರ ಒಪ್ಪಂದ ಎಂದು ಹೇಳಲಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಮಹತ್ವಾಕಾಂಕ್ಷೆಯ ಒಪ್ಪಂದದೊಂದಿಗೆ ಮುಂದುವರಿಯಲು ಈ ತಿಂಗಳು ನೈರೋಬಿಯಲ್ಲಿ ಸಭೆ ನಡೆಸುವ ಮೂಲಕ ವಿವಿಧ ದೇಶಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಬಹುದು ಎಂದು ತಿಳಿದುಬಂದಿದೆ.

ಸಮೀಕ್ಷೆಗೆ ಒಳಪಟ್ಟವರ ಪೈಕಿ 90 ಪ್ರತಿಶತದಷ್ಟು ಜನರು ಪ್ಲಾಸ್ಟಿಕ್​ ಬಳಕೆ ನಿಷೇಧವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಈ ಅಭಿಪ್ರಾಯವು ತ್ಯಾಜ್ಯ ಸಂಗ್ರಹಣೆ ಹಾಗೂ ಮರುಬಳಕೆಯ ಮೇಲೆ ಕೇಂದ್ರೀಕರಿಸುತ್ತದೆಯೇ ಅಥವಾ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್​ ಬಳಕೆಯನ್ನು ನಿಯಂತ್ರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವಸಂಸ್ಥೆಯು ಪ್ಲಾಸ್ಟಿಕ್​ ಮಾಲಿನ್ಯವನ್ನು ನಿಯಂತ್ರಿಸುವಂತಹ ಒಪ್ಪಂದವನ್ನು ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ ಮುಂಬರುವ ದಿನಗಳಲ್ಲಿ ಪರಿಸರಕ್ಕೆ ವ್ಯಾಪಕವಾದ ಹಾನಿ ಉಂಟಾಗುತ್ತದೆ. ಕೆಲವು ಸಮುದ್ರದ ಪ್ರಬೇಧಗಳು ಸಂಪೂರ್ಣ ಅಳಿವಿನ ಅಂಚಿಗೆ ಸಾಗುತ್ತಿದೆ. ಹವಳದ ಬಂಡೆಗಳು ಹಾಗೂ ಮ್ಯಾಂಗ್ರೋವ್​ನಂಹ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಡಬ್ಲುಡಬ್ಲುಎಫ್​​ ಅಧ್ಯಯನವು ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...