ಆಸ್ಕರ್ ಪ್ರಶಸ್ತಿ ವಿಜೇತ ಲಿಯೊನಾರ್ಡೋ ಡಿಕಾಪ್ರಿಯೋ ತಮ್ಮ ವಾಸ್ತವದ ಜೀವನದಲ್ಲಿ ಭಯಾನಕ ಸಾಹಸವನ್ನು ಒತ್ತಾಯಪೂರ್ವಕವಾಗಿ ಮಾಡಿದಂತಹ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ನಟ ಲಿಯೊನಾರ್ಡೋ ಡಿಕಾಪ್ರಿಯಾ ಡೋಂಟ್ ಲುಕ್ ಅಪ್ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ಶ್ವಾನಗಳನ್ನು ಕಾಪಾಡಲು ತಾವು ಸಂಪೂರ್ಣ ಹೆಪ್ಪುಗಟ್ಟಿದ್ದ ಸರೋವರಕ್ಕೆ ಹಾರಿದ್ದೆ ಎಂದು ಹೇಳಿದ್ದಾರೆ.
ವೀಕ್ಲಿ ಅರೌಂಡ್ ದಿ ಟೇಬಲ್ ಸಂದರ್ಶನದ ವೇಳೆಯಲ್ಲಿ ಟೈಟಾನಿಕ್ ಸ್ಟಾರ್ ಲಿಯೋನಾರ್ಡೋ ತಮ್ಮ ನಿಜ ಜೀವನದಲ್ಲಿ ನಡೆದ ಈ ಅತೀ ಸಾಹಸಿ ಪ್ರದರ್ಶನವನ್ನು ಬಹಿರಂಗಪಡಿಸಿದ್ದಾರೆ.
ಒಂದು ಸೈಬಿರೀಯನ್ ಹಸ್ಕಿ ತಳಿಯ ಶ್ವಾನವನ್ನು ಸರೋವರದಿಂದ ಹೊರಗೆ ತಳ್ಳುತ್ತಿದ್ದಂತೆಯೇ ಇನ್ನೊಂದು ಶ್ವಾನವು ಒಳಗೆ ಹಾರಿತು. ಕೊನೆಗೂ ತಮ್ಮ ಶ್ವಾನಗಳನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾಗಿ ಲಿಯೋನಾರ್ಡೋ ಹೇಳಿದ್ದಾರೆ.