alex Certify ಪ್ರಿಯತಮೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಪತ್ನಿಯಿಂದ ಚಪ್ಪಲಿ ಏಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಗೆ ಪತ್ನಿಯಿಂದ ಚಪ್ಪಲಿ ಏಟು….!

ಪತಿಯೊಬ್ಬ ತನ್ನ ಪತ್ನಿಗೆ ವಂಚಿಸಿ ಪ್ರಿಯತಮೆ ಜೊತೆ ಹೋಟೆಲ್ ರೂಮಿಗೆ ತೆರಳಿ ಚಕ್ಕಂದ ಆಡಲು ಮುಂದಾಗಿದ್ದು, ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆಕ್ರೋಶಗೊಂಡ ಪತ್ನಿ, ತನ್ನ ಪತಿ ಹಾಗೂ ಆತನ ಪ್ರಿಯತಮೆಗೆ ಚಪ್ಪಲಿಯಿಂದ ಬಾರಿಸಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಗ್ರಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪತಿಯ ಕಳ್ಳಾಟದ ಮಾಹಿತಿ ಪಡೆದ ಆತನ ಪತ್ನಿ ತನ್ನ ಸಹೋದರನ ಜೊತೆ ನೇರವಾಗಿ ರೂಮಿಗೆ ತೆರಳಿದ್ದಾಳೆ. ಅಲ್ಲಿ ಬಾಗಿಲು ತೆರೆಯುತ್ತಿದ್ದಂತೆಯೇ ಚಪ್ಪಲಿ ತೆಗೆದು ಇಬ್ಬರಿಗೂ ಬಾರಿಸಿದ್ದಾಳೆ.

ಈ ಸಂದರ್ಭದಲ್ಲಿ ಆಕೆಯ ಸಹೋದರ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಪತಿ ತನ್ನ ಪತ್ನಿಗೆ ಕ್ಷಮಿಸುವಂತೆ ಅಂಗಲಾಚಿ ಬೇಡಿಕೊಂಡರೂ ಆಕೆಯ ಕೋಪ ಶಮನವಾಗಿಲ್ಲ. ಅಲ್ಲದೆ ಪೊಲೀಸರನ್ನು ಕರೆಸುವಂತೆ ಹೇಳುತ್ತಿರುವ ಮಾತುಗಳು ಸಹ ರೆಕಾರ್ಡ್ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...