ಪೊಲೀಸ್ ಇಲಾಖೆಯ ದಾಖಲೆಗಳಲ್ಲಿ ಮೃತಪಟ್ಟಿದ್ದಾಳೆ ಎಂದು ಘೋಷಣೆಯಾದ ಬಿಹಾರದ ಮೋತಿಹಾರಿ ಜಿಲ್ಲೆಯ ಮಹಿಳೆಯು ಜಲಂಧರ್ನಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇನ್ನೂ ಆಘಾತಕಾರಿ ವಿಚಾರ ಏನೆಂದರೆ ಈಕೆಯ ಪತಿಯು ಪತ್ನಿಯನ್ನು ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.
ಶಾಂತಿ ದೇವಿ ಎಂದು ಗುರುತಿಸಲಾದ ಮಹಿಳೆಯು 2016ರ ಜೂನ್ 14ರಂದು ಲಕ್ಷ್ಮೀಪುರದ ನಿವಾಸಿ ದಿನೇಶ್ ರಾಮ್ರನ್ನು ವಿವಾಹವಾದರು. ಮದುವೆಯಾಗಿ ವರ್ಷಗಳ ಬಳಿಕ ಶಾಂತಿ ಏಪ್ರಿಲ್ 19ರಂದು ಪತಿಯ ಮನೆಯಿಂದ ಓಡಿ ಹೋಗಿ ತನ್ನ ಪ್ರಿಯತಮನ ಜೊತೆಯಲ್ಲಿ ಪಂಜಾಬ್ನಲ್ಲಿ ವಾಸಿಸುತ್ತಿದ್ದಾಳೆ.
ಮಹಿಳೆಯು ನಾಪತ್ತೆಯಾದ ಬಳಿಕ ಆಕೆಯ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ಪತಿಯ ವಿರುದ್ಧ ವರದಕ್ಷಿಣೆ ಆರೋಪವನ್ನು ಹೊರಿಸಿದ್ದಾರೆ.
ಅಲ್ಲದೇ ಆಕೆಯನ್ನು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು. ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪತಿ ದಿನೇಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.