ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾಸ್ಟೇಟ್ ಅಂಗಾಂಶ (ಪುರುಷ ಸಂತಾನೋತ್ಪತ್ತಿ ಗ್ರಂಥಿ) ಗಳಲ್ಲಿ ರೂಪುಗೊಳುತ್ತದೆ. ಇದು 60 ವರ್ಷದ ಮೇಲ್ಪಟ್ಟ ಪುರುಷರಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ತೊಂದರೆ ಮತ್ತು ನೋವು, ಮೂತ್ರದಲ್ಲಿ ರಕ್ತ. ಲೈಂಗಿಕ ಅಪಸಾಮಾನ್ಯ ಕ್ರಿಯೆ ಸಮಸ್ಯೆ ಕಂಡುಬರುತ್ತದೆ. ಈ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಯಾವ ಆಹಾರವನ್ನು ಸೇವಿಸಬೇಕು? ಸೇವಿಸಬಾರದು? ಎಂಬುದನ್ನು ತಿಳಿದುಕೊಳ್ಳಿ.
ಪ್ರಾಸ್ಟೇಟ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳು :
ನಿಮ್ಮ ಆಹಾರದಲ್ಲಿ ಹೆಚ್ಚು ಸೋಯಾ ಬೀನ್ಸ್, ಕಡಲೆ ಮತ್ತು ಮಸೂರ್ ನ್ನು ಸೇರಿಸಿ. ಟೊಮೆಟೊದಲ್ಲಿನ ಪೋಷಕಾಂಶ ಈ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ. ಹಾಗೇ ಆಹಾರದಲ್ಲಿ ಬಹಳಷ್ಟು ಸಸ್ಯಹಾರಿ ಮತ್ತು ಸೊಪ್ಪನ್ನು ಸೇರಿಸಿ. ಹಸಿರು ಚಹಾ, ದಾಳಿಂಬೆ ಬೀಜಗಳನ್ನು ಹೆಚ್ಚಾಗಿ ಬಳಸಿ.
ಪ್ರಾಸ್ಟೇಟ ಕ್ಯಾನ್ಸರ್ ಅಪಾಯವಿರುವವರು ಈ ಆಹಾರವನ್ನು ತಪ್ಪಿಸಿ :
ಮಾಂಸ ಮತ್ತು ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ. ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬಾರದು. ಪ್ರಾಣಿಗಳ ಕೊಬ್ಬನ್ನು ಸಸ್ಯ ಜನ್ಯ ಎಣ್ಣೆಯೊಂದಿಗೆ ಬದಲಿಸಿದರೆ ನೀವು ಹೆಚ್ಚು ಕಾಲ ಬದುಕಬಹುದು. ಕೊಬ್ಬಿನ ಆಹಾರ ತಪ್ಪಿಸಿ, ತೂಕವನ್ನು ಕಡಿಮೆಮಾಡಿಕೊಳ್ಳಿ.