alex Certify ಪ್ರಾಣ ಸ್ನೇಹಿತೆ ಜೊತೆ ಕಾಣಿಸಿಕೊಂಡ ನಟಿ ಮೇಘನಾ ರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣ ಸ್ನೇಹಿತೆ ಜೊತೆ ಕಾಣಿಸಿಕೊಂಡ ನಟಿ ಮೇಘನಾ ರಾಜ್

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ತಮ್ಮ ಪ್ರಾಣ ಸ್ನೇಹಿತೆ ನಝ್ರಿಯಾ ನಝೀಮ್‌ ಜೊತೆ ಕ್ಲಿಕ್ಕಿಸಿಕೊಂಡಿರೋ ಸೆಲ್ಫಿ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಮೇಘನಾ ಹಾಗೂ ನಝ್ರಿಯಾ ಬಹಳ ಕಾಲದಿಂದಲೂ ಆತ್ಮೀಯ ಸ್ನೇಹಿತೆಯರು. 2020ರಲ್ಲಿ ಮೇಘನಾ ತಮ್ಮ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡಾಗ ನಝ್ರಿಯಾ ಆಕೆಗೆ ಹೆಗಲಾಗಿ ನಿಂತಿದ್ದರಂತೆ.

ಈ ವಿಚಾರವನ್ನು ಖುದ್ದು ಮೇಘನಾ ಬಹಿರಂಗಪಡಿಸಿದ್ದರು. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು. ಈ ವೇಳೆ ಮೇಘನಾ 5 ತಿಂಗಳ ಗರ್ಭಿಣಿ. ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮೇಘನಾರನ್ನು ನಝ್ರಿಯಾ ಸಂತೈಸಿದ್ದಾರಂತೆ. ಆ ದುಃಖವನ್ನು ಮರೆಯಲು ಸಹಕರಿಸಿದ್ದಾರಂತೆ.

ಇವರಿಬ್ಬರೂ ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ರಾಜ್‌ ಅಭಿನಯದ ʼಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿʼ ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಮೌರ್ಯ ನಿರ್ದೇಶನದ ʼಬುದ್ಧಿವಂತ 2ʼ ಚಿತ್ರದಲ್ಲೂ ಮೇಘನಾ ಅಭಿನಯಿಸಿದ್ದಾರೆ. ಪನ್ನಗಾಭರಣ ನಿರ್ದೇಶನದ ಥ್ರಿಲ್ಲರ್‌ ಒಂದರಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಅತ್ತ ನಝ್ರಿಯಾ ಸಹ ನಾನಿ ಜೊತೆಗೆ ತೆಲುಗಿನ ಸಿನೆಮಾ, ಅಂಟೆ ಸುಂದರಾನಿಕಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೂನ್‌ 10 ರಂದು ಈ ಚಿತ್ರ ಬಿಡುಗಡೆಯಾಗಿತ್ತು.

https://www.instagram.com/p/Cg3i3O_vYWo/?utm_source=ig_embed&ig_rid=1f52f89d-a7aa-4b4d-80be-ad45f00ac444

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...