alex Certify ಪ್ರಪಂಚದಲ್ಲಿ ಅತಿ ಹೆಚ್ಚು ಬಳಸುವ ಮಸಾಲೆ ಪದಾರ್ಥ ಯಾವುದು ಗೊತ್ತಾ? ಅಚ್ಚರಿ ಮೂಡಿಸುತ್ತೆ ಈ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಪಂಚದಲ್ಲಿ ಅತಿ ಹೆಚ್ಚು ಬಳಸುವ ಮಸಾಲೆ ಪದಾರ್ಥ ಯಾವುದು ಗೊತ್ತಾ? ಅಚ್ಚರಿ ಮೂಡಿಸುತ್ತೆ ಈ ಸಂಗತಿ

ಜಗತ್ತಿನಲ್ಲಿ ಭಿನ್ನ ಭಿನ್ನ ಬಗೆಯ ಆಹಾರವನ್ನು ಜನರು ಸೇವಿಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ವೈವಿದ್ಯಮಯ ತಿನಿಸುಗಳಿರುತ್ತವೆ ಅಂದರೆ ತಪ್ಪೇನಿಲ್ಲ. ಇಡೀ ಜಗತ್ತೇ ಆಹಾರದ ರುಚಿಗಾಗಿ ಹಾತೊರೆಯುತ್ತದೆ.

ಜನರು ತಿನಿಸುಗಳನ್ನು ಆಸ್ವಾದಿಸಲೆಂದೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸುವ ಬಗ್ಗೆ ನೀವು ಕೂಡ ಕೇಳಿರಬಹುದು. ಫುಡ್‌ ಬ್ಲಾಗರ್‌ಗಳಂತೂ ಇದನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಉಪ್ಪಿಗಿಂತ ರುಚಿ ಬೇರೆಯಿಲ್ಲ ಅನ್ನೋ ಮಾತಿನಂತೆ ಉಪ್ಪು ನಮ್ಮ ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಆದರೆ ಉಪ್ಪು ಅತಿಯಾದರೆ ಸ್ವಾದವನ್ನು ಕೆಡಿಸಿಬಿಡುತ್ತದೆ. ಪ್ರತಿಯೊಂದು ಖಾದ್ಯವನ್ನು ರುಚಿಕರವಾಗಿಸುವಲ್ಲಿ ಉಪ್ಪು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ ಅದೇ ರೀತಿ ಪ್ರಪಂಚದಾದ್ಯಂತ ಎಲ್ಲರೂ ಇಷ್ಟಪಡುವ ಮಸಾಲೆ ಪದಾರ್ಥವಿದೆ.

ಹೌದು ಜಗತ್ತಿನಲ್ಲಿ ಅತಿ ಹೆಚ್ಚು ಜನರು ಇಷ್ಟಪಡುವ ಮಸಾಲೆ ಎಂದರೆ ಕಾಳು ಮೆಣಸು. ತ್ವರಿತ ಆಹಾರದಿಂದ ಸಾಂಪ್ರದಾಯಿಕ ಭಕ್ಷ್ಯಗಳವರೆಗೆ ಎಲ್ಲದರಲ್ಲೂ ಕಾಳುಮೆಣಸನ್ನು ಬಳಸಲಾಗುತ್ತದೆ. ಭಾರತದಲ್ಲಿ ಕೆಂಪು ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಗಳ ಟ್ರೆಂಡ್ ಹೆಚ್ಚು ಇರಬಹುದು. ಆದರೆ ಬೇರೆ ದೇಶಗಳ ವಿಷಯಕ್ಕೆ ಬಂದರೆ ಕಾಳುಮೆಣಸು ಜನರ ಮೊದಲ ಆಯ್ಕೆಯಾಗಿದೆ. ಜನರು ತಿನಿಸುಗಳ ರುಚಿಯನ್ನು ಹೆಚ್ಚಿಸಲು ಕಾಳುಮೆಣಸನ್ನು ಬಳಸುತ್ತಾರೆ.

ಕಾಳುಮೆಣಸಿನ ಜೊತೆಗೆ ಸಂಸ್ಕರಿಸಿದ ಕ್ಯಾಪ್ಸಿಕಂ ಬೀಜಗಳನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಸಂಸ್ಕರಿಸಿದ ಕ್ಯಾಪ್ಸಿಕಂ ಬೀಜಗಳ 10 ಗ್ರಾಂ ಪ್ಯಾಕೆಟ್‌ ಬೆಲೆ 1200 ರಿಂದ 1500 ರೂಪಾಯಿ ಇದೆ. ಇದನ್ನು ಹೆಚ್ಚಾಗಿ ಫಾಸ್ಟ್ ಫುಡ್ ಅಲಂಕಾರದಲ್ಲಿ ಬಳಸಲಾಗುತ್ತದೆ. ಇನ್ನು ಕಾಳುಮೆಣಸಿನ ವಿಶೇಷತೆಗಳನ್ನು ನೋಡೋದಾದ್ರೆ ಹಸಿರು ಎಲೆಗಳ ಬಳ್ಳಿಯಲ್ಲಿ ಇದು ಬೆಳೆಯುತ್ತದೆ. ಬಳ್ಳಿ ನೆಟ್ಟ ಬಳಿಕ ಇದು ಬೆಳೆಯಲು 3 ವರ್ಷಗಳೇ ಬೇಕು.

ಉತ್ತಮ ಫಸಲನ್ನು ಸಂಪೂರ್ಣವಾಗಿ ನೀಡಲು 7-8 ವರ್ಷಗಳು ಬೇಕಾಗುತ್ತದೆ. ಕಾಳುಮೆಣಸಿನ ಬಳ್ಳಿಯ ಜೀವಿತಾವಧಿ ಸುಮಾರು 20 ವರ್ಷಗಳು. ಕಾಳುಮೆಣಸಿನ ಬಳ್ಳಿಗಳು ಮೊದಲು ಹೂ ಬಿಡುತ್ತವೆ. ಈ ಹೂವುಗಳು ಬಿದ್ದು ಹಸಿರು ಕಾಯಿಗಳು ಮೂಡುತ್ತವೆ. ಇದು ಹಣ್ಣದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇವುಗಳನ್ನು ಒಣಗಿಸಿ ಕಾಳುಮೆಣಸನ್ನು ತಯಾರಿಸಲಾಗುತ್ತದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...