alex Certify ಪ್ರಧಾನಿ ಮೋದಿಯವರನ್ನ ಗೇಲಿ‌ ಮಾಡಿದ ಕಾರ್ಯಕ್ರಮ ಪ್ರಸಾರ; ಖಾಸಗಿ ವಾಹಿನಿಗೆ ಕೇಂದ್ರದ ನೋಟೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಯವರನ್ನ ಗೇಲಿ‌ ಮಾಡಿದ ಕಾರ್ಯಕ್ರಮ ಪ್ರಸಾರ; ಖಾಸಗಿ ವಾಹಿನಿಗೆ ಕೇಂದ್ರದ ನೋಟೀಸ್

ತಮಿಳುನಾಡಿನ ಬಿಜೆಪಿ ರಾಜ್ಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಅಧ್ಯಕ್ಷ ನಿರ್ಮಲ್ ಕುಮಾರ್ ಅವರು ಸಲ್ಲಿಸಿದ ದೂರಿನ ಕುರಿತು ಪ್ರತಿಕ್ರಿಯೆ ಕೋರಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್‌ಗೆ ನೋಟಿಸ್ ಜಾರಿ ಮಾಡಿದೆ‌. ಇತ್ತೀಚೆಗೆ ತಮಿಳು ರಿಯಾಲಿಟಿ ಶೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಹ್ಯಕರ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿತ್ತು.

ಝೀ ತಮಿಳು ಟಿವಿ ಚಾನೆಲ್ ನಲ್ಲಿ ಜನವರಿ 15 ರಂದು ಪ್ರಸಾರವಾದ, ಜೂನಿಯರ್ ಸೂಪರ್ ಸ್ಟಾರ್ ಸೀಸನ್ 4ರ ಒಂದು ಸ್ಕಿಟ್ ವಿರುದ್ಧ ಸಚಿವಾಲಯಕ್ಕೆ ದೂರು ನೀಡಲಾಗಿದೆ. ದೂರಿನ ಸಾರವನ್ನು ಲಗತ್ತಿಸಿರುವ ಸಚಿವಾಲಯ, 7 ದಿನಗಳ ಅವಧಿಯೊಳಗೆ ಈ ಕುರಿತು ಪ್ರತಿಕ್ರಿಯೆ ನೀಡಲು ವಿನಂತಿಸಿದ್ದು, ವಿಫಲವಾದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟೀಸ್ ನೀಡಿದೆ‌.

ಇಬ್ಬರು ಸ್ಪರ್ಧಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ ಸ್ಕಿಟ್ ಅನ್ನು ಪ್ರದರ್ಶಿಸಿದ್ದು, ತಮಿಳಿನ ಐತಿಹಾಸಿಕ ರಾಜಕೀಯ ವಿಡಂಬನಾತ್ಮಕ ಚಲನಚಿತ್ರ ಇಮ್ಸೈ ಅರಸನ್ 23 ಎಮ್ ಪುಲಿಕೇಸಿಯ ರಾಜ ಮತ್ತು ಮಂತ್ರಿಯಂತೆ ಮಕ್ಕಳಿಗೆ ಬಟ್ಟೆ ತೊಡಿಸಲಾಗಿದೆ. ಈ ಸ್ಪರ್ಧಿಗಳು ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕರೆನ್ಸಿಗಳನ್ನು ಅಮಾನ್ಯಗೊಳಿಸಲು ಯತ್ನಿಸಿ ವಿಫಲನಾದ ರಾಜನೊಬ್ಬನ ಕಥೆಯನ್ನ ಸ್ಕಿಟ್ ರೂಪದಲ್ಲಿ ಪ್ರದರ್ಶಿಸಿದ್ದಾರೆ.

‘ರಾಜ’ ಕಪ್ಪುಹಣವನ್ನು ನಿರ್ಮೂಲನೆ ಮಾಡುವ ಬದಲು ವಿವಿಧ ಬಣ್ಣಗಳ ಜಾಕೆಟ್‌ಗಳನ್ನು ಧರಿಸಿ ತಿರುಗಾಡುತ್ತಾನೆ ಎಂದು ಮಕ್ಕಳು ಸ್ಕಿಟ್ ನಲ್ಲಿ ಹೇಳಿದ್ದಾರೆ. ಬಂಡವಾಳ ಹಿಂತೆಗೆದುಕೊಳ್ಳುವ ಯೋಜನೆ, ದೇಶದಲ್ಲಿ ರಾಜನ ಆಳ್ವಿಕೆಯನ್ನು ಗೇಲಿ ಮಾಡುವುದನ್ನು ಸಹ ಪ್ರದರ್ಶಿಸಲಾಗಿದೆ. ಇದಕ್ಕೆ ಸಭಿಕರಲ್ಲಿ ಹಾಜರಿದ್ದ ಕಾರ್ಯಕ್ರಮದ ತೀರ್ಪುಗಾರರು ಮತ್ತು ಇತರರು ಚಪ್ಪಾಳೆ ತಟ್ಟುವುದು ಕಂಡುಬರುತ್ತದೆ.

ಈ ವಿಷಯವಾಗಿ, ಝೀ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಿಜು ಪ್ರಭಾಕರನ್ ಅವರಿಗೆ ನಿರ್ಮಲ್ ಕುಮಾರ್ ಪತ್ರ ಬರೆದಿದ್ದು, ಸುಮಾರು 10 ವರ್ಷ ವಯಸ್ಸಿನ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಪ್ರಧಾನಿ ವಿರುದ್ಧ ಈ ಕಾಮೆಂಟ್‌ಗಳನ್ನು ಮಾಡಲು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಚಾನೆಲ್ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿಯವರ ವಿರುದ್ಧ “ಅಸ್ಪಷ್ಟ ತಪ್ಪು ಮಾಹಿತಿ” ಹರಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಬಿಜೆಪಿ‌ ನಾಯಕರು ಕಾರ್ಯಕ್ರಮದ ತೀರ್ಪುಗಾರರನ್ನು ಸಂಪರ್ಕಿಸಿದ್ದು, ಅವರು ನಾವು ಆ ಪ್ರದರ್ಶನಕ್ಕೆ ಆ ರೀತಿಯ ಪ್ರತಿಕ್ರಿಯ ನೀಡಿಲ್ಲಾ. ಬೇರೆ ಸಂದರ್ಭದ ಕ್ಲಿಪ್ ಗಳನ್ನ ತೆಗೆದುಕೊಂಡು ಈ ರೀತಿಯಾಗಿ ಎಡಿಟ್ ಮಾಡಲಾಗಿದೆ ಎಂದು ಜಾರಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ತನ್ನ ವೆಬ್‌ಸೈಟ್‌ನಿಂದ ಸಂಬಂಧಪಟ್ಟ ಭಾಗವನ್ನು ತೆಗೆದುಹಾಕುವುದಾಗಿ, ಜೊತೆಗೆ ಅದನ್ನು ಮರುಪ್ರಸಾರ ಮಾಡುವುದಿಲ್ಲ ಎಂದು ವಾಹಿನಿ ಭರವಸೆ ನೀಡಿದೆ ಎಂದು ನಿರ್ಮಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...