ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಂದು 12 ದಿನಗಳ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರವು ಇಂದು 80 ಪೈಸೆ ಏರಿಕೆ ಕಂಡಿದೆ. ಇತ್ತ ಎಲ್ಪಿಜಿ ಸಿಲಿಂಡರ್ ಬೆಲೆ ಕೂಡ 50 ರೂ. ಏರಿಕೆ ಕಂಡಿದೆ.
ದೆಹಲಿಯಲ್ಲಿ ಈ ಹಿಂದೆ 95.41 ರೂಪಾಯಿ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು ಇದೀಗ ಲೀಟರ್‌ಗೆ 96.21 ರೂಪಾಯಿ ಆಗಿದೆ. ಇತ್ತ ಡೀಸೆಲ್ ದರವು ಪ್ರತಿ ಲೀಟರ್‌ಗೆ 86.67 ರೂಪಾಯಿಗಳಿಂದ 87.47 ರೂಪಾಯಿಗಳಿಗೆ ಏರಿಕೆ ಕಂಡಿದೆ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು 105.51 ರೂ., ಡೀಸೆಲ್ ದರಗಳು ಲೀಟರ್‌ಗೆ 90.62 ರೂ. ಆಗಿದೆ.
ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ 102.16 ಮತ್ತು 92.19 ರೂ.ಗೆ ಏರಿಕೆಯಾಗಿದೆ.
ಜಾಗತಿಕ ಕಚ್ಛಾ ತೈಲಗಳು ಮೂರಂಕಿ ದಾಟಿ ಬಹಳ ದಿನ ಕಳೆದಿದ್ದರೂ ಸಹ ನವೆಂಬರ್ ಬಳಿಕ ಇಂಧನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ರಷ್ಯಾ ಹಾಗೂ ಉಕ್ರೇನ್ನ ನಡುವಿನ ಯುದ್ಧದಿಂದಾಗಿ ಇಂಧನದ ಬೆಲೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು.