alex Certify ಪ್ರತಿ ತಿಂಗಳು 233 ರೂ. ಪಾವತಿಸಿ ಗಳಿಸಿ 17 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ತಿಂಗಳು 233 ರೂ. ಪಾವತಿಸಿ ಗಳಿಸಿ 17 ಲಕ್ಷ ರೂ.

ಎಲ್ಐಸಿ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡ್ತಿದೆ. ಸುರಕ್ಷಿತ ಹೂಡಿಕೆ ಬಯಸುವವರು, ಎಲ್ಐಸಿ ಪಾಲಿಸಿ ಖರೀದಿ ಮಾಡಬಹುದು. ಎಲ್ಐಸಿಯ ಜೀವನ್ ಲಾಭ್ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ಪ್ರತಿ ತಿಂಗಳು ನೀವು 233 ರೂಪಾಯಿ ಠೇವಣಿ ಇಡುವ ಮೂಲಕ 17 ಲಕ್ಷ ರೂಪಾಯಿ ಪಡೆಯಬಹುದು. ಎಲ್ಲ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಶುರು ಮಾಡಲಾಗಿದೆ.

ಇದು, ಲಿಂಕ್ ಮಾಡದ ಪಾಲಿಸಿಯಾಗಿದೆ. ಷೇರು ಮಾರುಕಟ್ಟೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಷೇರು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆಯಾದ್ರೂ ಇದ್ರಲ್ಲಿ ಯಾವುದೇ ಬದಲಾವಣೆ ಕಾಣಿಸುವುದಿಲ್ಲ. ಆದ್ರೆ ಇದ್ರಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಇದು ಸೀಮಿತ ಪ್ರಿಮಿಯಂ ಯೋಜನೆಯಾಗಿದೆ. ಮಕ್ಕಳ ಮದುವೆ, ಆಸ್ತಿ ಖರೀದಿ, ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಶುರು ಮಾಡಲಾಗಿದೆ.

8 ರಿಂದ 59 ವರ್ಷ ವಯಸ್ಸಿನ ಜನರು ಈ ಪಾಲಿಸಿಯನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಪಾಲಿಸಿ ಅವಧಿಯನ್ನು 16 ರಿಂದ 25 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಕನಿಷ್ಠ 2 ಲಕ್ಷದ ವಿಮಾ ಮೊತ್ತವನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. 3 ವರ್ಷಗಳ ಕಾಲ ಪ್ರೀಮಿಯಂ ಪಾವತಿಯ ಮೇಲೂ ಸಾಲ ಸೌಲಭ್ಯ ಲಭ್ಯವಿದೆ.

ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರನು ಮರಣ ಹೊಂದಿದಲ್ಲಿ ಮತ್ತು ಮರಣದ ತನಕ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದರೆ, ನಾಮಿನಿಯು ಹೆಚ್ಚುವರಿ ವಿಮಾ ಮೊತ್ತವನ್ನು ಪಡೆಯುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...