alex Certify ಪ್ರತಿವರ್ಷವೂ ಹಾಕಿಸಿಕೊಳ್ಳಬೇಕಾ ಕೊರೊನಾ ಲಸಿಕೆ…? ಇಲ್ಲಿದೆ ಈ ಕುರಿತ ತಜ್ಞರ ಅಭಿಪ್ರಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿವರ್ಷವೂ ಹಾಕಿಸಿಕೊಳ್ಳಬೇಕಾ ಕೊರೊನಾ ಲಸಿಕೆ…? ಇಲ್ಲಿದೆ ಈ ಕುರಿತ ತಜ್ಞರ ಅಭಿಪ್ರಾಯ

ಕೊರೊನಾ ವೈರಸ್‌ ಆರ್ಭಟ ಶುರುವಾದಾಗಿನಿಂದ್ಲೂ ಅದನ್ನು ಪತ್ತೆ ಮಾಡೋದು, ಪರೀಕ್ಷಾ ಕಿಟ್‌ ತಯಾರಿಸೋದು, ಅದಕ್ಕೆ ವ್ಯಾಕ್ಸಿನ್‌ ಗಳ ಸಂಶೋಧನೆ ಹೀಗೆ ಸವಾಲುಗಳ ಸರಮಾಲೆಯೇ ಎದುರಾಗ್ತಾ ಇದೆ. ಪುಣೆಯ ಎನ್‌ ಐ ವಿ ವಿಜ್ಞಾನಿಗಳು ಈ ಎಲ್ಲ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದಲ್ಲದೆ ದೇಶದಲ್ಲಿ ಕೊರೋನಾ ವೈರಸ್‌ ಅನ್ನು ಮೊದಲು ಪತ್ತೆ ಮಾಡಿದ್ದರು.

ದೇಶಾದ್ಯಂತ ಸೋಂಕು ಪತ್ತೆಗಾಗಿ ಪರೀಕ್ಷಾ ಕಿಟ್‌ ಗಳನ್ನು ಸಹ ಸಿದ್ಧಪಡಿಸಿದ್ದಾರೆ. ದೇಶದಲ್ಲಿ ಕೋವಿಡ್‌ ಕೊರೋನಾ ಸೋಂಕಿನ ಪ್ರಕರಣಗಳನ್ನು ತ್ವರಿತವಾಗಿ ಪರೀಕ್ಷಿಸಲು ಸಹ ಅವರು ತರಬೇತಿ ಪಡೆದಿದ್ದಾರೆ.

NIV ಸಂಶೋಧನಾ ಸಂಸ್ಥೆಯಲ್ಲಿ 60ಕ್ಕೂ ಹೆಚ್ಚು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಇದು ಜೀನೋಮ್ ಅನುಕ್ರಮವನ್ನು ಮಾಡುವ ದೇಶದ ಏಕೈಕ ಲ್ಯಾಬ್ ಎನಿಸಿಕೊಂಡಿದೆ. ಕೊರೋನಾ ಬಂದ ನಂತರ NIV ಪುಣೆ  ಸಂಶೋಧನಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ.ಎರಡು ವರ್ಷಗಳ ಬಳಿಕ ಕೊರೊನಾ ಸೋಂಕು ಕಡಿಮೆಯಾಗಿದ್ದು, ಅನೇಕ ರಾಜ್ಯಗಳಲ್ಲಿ ಸೋಂಕು ತಡೆಗೆ ವಿಧಿಸಿದ್ದ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವೆಡೆ ಮಾಸ್ಕ್‌ ಧರಿಸುವುದು ಕೂಡ ಈಗ ಕಡ್ಡಾಯವೇನಲ್ಲ. ಆದ್ರೆ ಎನ್‌ ಐ ವಿ ನಿರ್ದೇಶಕರ ಪ್ರಕಾರ ಕೊರೊನಾ ಸಂಪೂರ್ಣವಾಗಿ ಕೊನೆಗೊಳ್ಳುವವರೆಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಜನರು ಗುಂಪಿನಲ್ಲಿ ಹೋದರೆ, ಖಂಡಿತವಾಗಿಯೂ ಮಾಸ್ಕ್ ಧರಿಸಿ.

ಸಾಂಕ್ರಾಮಿಕ ರೋಗವು ದೀರ್ಘಕಾಲದವರೆಗೆ ಮುಂದುವರಿದರೆ, ಕೊರೋನಾದಿಂದ ರಕ್ಷಿಸಿಕೊಳ್ಳಲು ಜನರಿಗೆ ಪ್ರತಿ ವರ್ಷ ಬೂಸ್ಟರ್ ಡೋಸ್ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ. ಸದ್ಯ ದೇಶದಲ್ಲಿ ಕೋವಿಡ್‌ ಅಬ್ಬರ ತಗ್ಗಿದೆ. ಸೋಂಕು ನಿಯಂತ್ರಣದಲ್ಲಿದ್ದು, ಕೊರೊನಾ ಪ್ರಕರಣಗಳು ಸಾವಿರದ ಆಸಿಪಾಸಿನಲ್ಲಿವೆ. ವಿವಿಧ ರಾಜ್ಯಗಳಲ್ಲೂ ಸೋಂಕಿನ ಪ್ರಕರಣಗಳು ಕಡಿಮೆಯಾಗಿವೆ. ಹಾಗಂತ ಮಾಸ್ಕ್‌ ಕೂಡ ಧರಿಸದೇ ಇರುವುದು ಅಪಾಯಕಾರಿಯೆಂದು ತಜ್ಞರು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...