alex Certify ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ 1000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುತ್ತಿದೆ ʼಓಲಾʼ

ಓಲಾ ಎಲೆಕ್ಟ್ರಿಕ್ ಪ್ರತಿದಿನ 1000 ಸ್ಕೂಟರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ. ಕಂಪನಿಯ ಮುಖ್ಯಸ್ಥ ಭವಿಶ್ ಅಗರ್ವಾಲ್ ಅವರು ಚೆನ್ನೈನಲ್ಲಿರುವ ಕಂಪನಿಯ ಫ್ಯೂಚರ್ ಫ್ಯಾಕ್ಟರಿಯಲ್ಲಿ ನಿಲುಗಡೆ ಮಾಡಿರುವ ಸ್ಕೂಟರ್‌ಗಳ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು, ಒಂದೇ ದಿನದಲ್ಲಿ ಒಂದು ಸಾವಿರ ಸ್ಕೂಟರ್‌ಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ ಖರೀದಿ ವಿಂಡೋ ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದು ಓಲಾ ಸಿಇಒ ಘೋಷಿಸಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಓಲಾ ಕಂಪನಿಯು ಖರೀದಿ ವಿಂಡೋ ತೆರೆಯಲು ಯೋಜಿಸುತ್ತಿದ್ದರೆ, ಮಾರಾಟದ ಮೊದಲ ಹಂತದಲ್ಲಿ ಅನೇಕ ಗ್ರಾಹಕರು ತಡವಾದ ವಿತರಣೆಯ ಬಗ್ಗೆ ದೂರಿದ್ದಾರೆ. ಡಿಸೆಂಬರ್ 31ರಂದು, ಮೊದಲ ಹಂತದಲ್ಲಿ ನೋಂದಣಿ ಮಾಡಿದ್ದ ಎಲ್ಲಾ ಸ್ಕೂಟರ್‌ಗಳನ್ನು ರವಾನಿಸಲಾಗಿದೆ ಎಂದು ಓಲಾ ಸಿಇಒ ಹೇಳಿದ್ದಾರೆ. ಆದರೆ, ಅನೇಕ ಖರೀದಿದಾರರು ವಿತರಣೆ ತಡವಾದ ಬಗ್ಗೆ ದೂರು ನೀಡಿದ್ದಾರೆ.

ಓಲಾ ಡಿಸೆಂಬರ್ 15 ರಿಂದ ಎಲೆಕ್ಟ್ರಿಕ್ ಸ್ಕೂಟರ್ ನ ವಿತರಣೆಯನ್ನು ಪ್ರಾರಂಭಿಸಿತು. ಕಂಪನಿಯು ಓಲಾ ಎಸ್-1 ಮತ್ತು ಓಲಾ ಎಸ್-1 ಪ್ರೋ ಎಂಬ ಎರಡು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಮೊದಲ ಹಂತದ ಮಾರಾಟದಲ್ಲಿ ಓಲಾ ಎಸ್-1 ಅನ್ನು ಬುಕ್ ಮಾಡಿದ ಅನೇಕ ಖರೀದಿದಾರರು ಓಲಾ ಎಸ್-1 ಪ್ರೋ ಅನ್ನು ಪಡೆದಿದ್ದಾಗಿ ವರದಿಯಾಗಿದೆ. ಓಲಾ ಎಸ್-1 ಸ್ಕೂಟರ್ ಖರೀದಿದಾರರು 30,000 ರೂ. ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಸ್ಕೂಟರ್ ಅನ್ನು ಸಂಪೂರ್ಣವಾಗಿ ಓಲಾ ಎಸ್-1 ಪ್ರೋ ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

— Bhavish Aggarwal (@bhash) January 6, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...