alex Certify ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚುತ್ತಿದ್ದೀರಾ…..? ಚರ್ಮಕ್ಕೆ ಹಾನಿ ಮಾಡುತ್ತೆ ಇದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಮುಖಕ್ಕೆ ಅಲೋವೆರಾ ಹಚ್ಚುತ್ತಿದ್ದೀರಾ…..? ಚರ್ಮಕ್ಕೆ ಹಾನಿ ಮಾಡುತ್ತೆ ಇದು….!

ಅಲೋವೆರಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅಲೋವೆರಾವನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ಹೊಳಪನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಅಲೋವೆರಾ ಹಲವಾರು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಸಾಕಷ್ಟು ಕಂಡುಬರುತ್ತವೆ. ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಅಲೋವೆರಾವನ್ನು ಅನ್ವಯಿಸುವುದರಿಂದ ಚರ್ಮವು ಮೃದುವಾಗುತ್ತದೆ ಮತ್ತು ಹೊಳಪು ಪಡೆದುಕೊಳ್ಳುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಅಲೋವೆರಾ ನಿಮ್ಮ ಚರ್ಮಕ್ಕೆ ಹಾನಿ ಸಹ ಮಾಡುತ್ತದೆ. ಹೌದು ಅಲೋವೆರಾವನ್ನು ಅತಿಯಾಗಿ ಬಳಸುವುದರಿಂದ ನಿಮ್ಮ ತ್ವಚೆಗೆ ಹಾನಿಯುಂಟಾಗಬಹುದು. ಅಲೋವೆರಾವನ್ನು ಮುಖಕ್ಕೆ ಪ್ರತಿದಿನ ಹಚ್ಚುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ನೋಡೋಣ.

ಮುಖದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು

ಸಾಮಾನ್ಯವಾಗಿ ಜನರು ಅಲೋವೆರಾ ಎಲೆಗಳನ್ನು ಕಿತ್ತು ಅದರ  ಜೆಲ್ ಅನ್ನು ಮುಖಕ್ಕೆ ಹಚ್ಚುತ್ತಾರೆ. ಆದರೆ ಅಲೋವೆರಾ ಎಲೆಗಳಿಂದ ಜೆಲ್ ಜೊತೆಗೆ ಹಳದಿ ಬಣ್ಣದ ಮೇಣ ಕೂಡ  ಹೊರಬರುತ್ತದೆ. ಈ ಮೇಣದಿಂದಾಗಿ ಮುಖದ ಮೇಲೆ ಸಣ್ಣ ಸಣ್ಣ ಗುಳ್ಳೆಗಳಾಗುತ್ತವೆ. ಅಲೋವೆರಾ ಜೆಲ್ ಅನ್ನು ಮುಖಕ್ಕೆ ಅನ್ವಯಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಬೇಕು, ಇಲ್ಲದಿದ್ದರೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಅಲರ್ಜಿ

ಅನೇಕರಿಗೆ ಅಲೋವೆರಾ ಜೆಲ್ ಅನ್ನು ಮುಖದ ಮೇಲೆ ಹಚ್ಚಿಕೊಂಡರೆ ಅಲರ್ಜಿ ಉಂಟಾಗುತ್ತದೆ. ಅಲೋವೆರಾದಲ್ಲಿರುವ ಹಳದಿ ಬಣ್ಣದ ಮೇಣದಂತಹ ಪದಾರ್ಥ ಕಿರಿಕಿರಿ ಮತ್ತು ತುರಿಕೆಗೆ ಕಾರಣವಾಗಬಹುದು. ಚರ್ಮದ ಮೇಲೆ ಕೆಂಪು ದದ್ದುಗಳು ಏಳುವ ಸಾಧ್ಯತೆಯೂ ಇರುತ್ತದೆ.

ಮೊಡವೆ ಸಮಸ್ಯೆ

ಅಲೋವೆರಾದಲ್ಲಿ ಹೆಚ್ಚಿನ ಪ್ರಮಾಣದ ನೀರು ಇದೆ. ಆದ್ದರಿಂದ ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಆದರೆ ನಿಮ್ಮ ಚರ್ಮವು ಮೊದಲೇ ಎಣ್ಣೆಯುಕ್ತವಾಗಿದ್ದರೆ, ಮುಖದ ಮೇಲೆ ಮೊಡವೆಗಳು ಏಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಅಲೋವೆರಾವನ್ನು ಅತಿಯಾಗಿ ಬಳಸದೇ ಇರುವುದು ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...