alex Certify ಪ್ರತಿದಿನ ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ಹಿಮ್ಮಡಿ ಬಿರುಕಿನಿಂದ ಸಿಗುತ್ತೆ ಮುಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಮಲಗುವ ಮುನ್ನ ಈ ಕೆಲಸ ಮಾಡಿದ್ರೆ ಹಿಮ್ಮಡಿ ಬಿರುಕಿನಿಂದ ಸಿಗುತ್ತೆ ಮುಕ್ತಿ

ಚಳಿಗಾಲ ಬಂದ ಕೂಡಲೇ ನಮ್ಮ ತ್ವಚೆ ಹೊಳಪು ಕಳೆದುಕೊಂಡು ಒಣಗಿ ಹೋಗುತ್ತದೆ. ಮುಖ ಮತ್ತು ತುಟಿಗಳ ರಕ್ಷಣೆಗೆ ನಾವು ಸಾಕಷ್ಟು ಕಸರತ್ತು ಮಾಡುತ್ತೇವೆ. ಆದರೆ ಒಡೆದ ಹಿಮ್ಮಡಿ ಬಗ್ಗೆ ಹೆಚ್ಚು ಗಮನ ಹರಿಸುವುದೇ ಇಲ್ಲ. ಚಳಿಗಾಲದಲ್ಲಿ ಹಿಮ್ಮಡಿಗಳು ಬಿರುಕು ಬಿಡುತ್ತವೆ, ಇದರಿಂದಾಗಿ ನಡೆಯಲು ಕೂಡ ಕಷ್ಟವಾಗಬಹುದು. ಹಾಗಾಗಿ ತ್ವಚೆಯ ಜೊತೆಗೆ ಹಿಮ್ಮಡಿಗಳು ಒಡೆಯದಂತೆ ಜೋಪಾನ ಮಾಡಬೇಕು. ಈ ಸಮಸ್ಯೆಗೆ ಹಾಲಿನಲ್ಲಿ ಪರಿಹಾರವಿದೆ.

ಹಾಲಿನಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳಿವೆ. ಇದು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಆದ್ದರಿಂದ ರಾತ್ರಿ ಮಲಗುವ ಮೊದಲು ಪಾದಗಳಿಗೆ ಹಾಲನ್ನು ಅನ್ವಯಿಸಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಇನ್ನೊಂದರಲ್ಲಿ ಹಾಲು ಕಾಯಿಸಿ. ಉಗುರು ಬೆಚ್ಚಗಾದಾಗ ಎರಡನ್ನೂ ಒಟ್ಟಿಗೆ ಬೆರೆಸಿಕೊಳ್ಳಿ. 1 ಕಪ್‌ ಹಾಲು ತೆಗೆದುಕೊಂಡರೆ 1 ಲೋಟ ಹಾಲನ್ನು ತೆಗೆದುಕೊಳ್ಳಬೇಕು.

ಈ ಮಿಶ್ರಣವನ್ನು ಟಬ್‌ನಲ್ಲಿ ಹಾಕಿ, ಅದಕ್ಕೆ 1 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿಕೊಂಡು ಎಲ್ಲವನ್ನೂ ಮಿಕ್ಸ್‌ ಮಾಡಿ. ಈ ಟಬ್‌ನಲ್ಲಿ ಪಾದಗಳನ್ನು ಅದ್ದಿ. ಕನಿಷ್ಠ 5 ನಿಮಿಷಗಳ ಕಾಲ ಈ ಮಿಶ್ರಣದಿಂದ ಎರಡೂ ಪಾದ ಹಿಮ್ಮಡಿಗಳಿಗೆ ಮಸಾಜ್‌ ಮಾಡಿ. ಬಳಿಕ ಪಾದಗಳನ್ನು ಟಬ್‌ನಿಂದ ಹೊರತೆಗೆದು ಟವೆಲ್‌ನಿಂದ ಒರೆಸಿ. ನಿಯಮಿತವಾಗಿ ಈ ರೀತಿ ಹಾಲಿನಿಂದ ಹಿಮ್ಮಡಿಗೆ ಮಸಾಜ್‌ ಮಾಡುವುದರಿಂದ ಚರ್ಮ ಒಡೆಯುವುದಿಲ್ಲ. ಹಾಲು ಚಳಿಗಾಲದಲ್ಲಿ ಚರ್ಮದಲ್ಲಿನ ಉರಿಯೂತವನ್ನು ಹೋಗಲಾಡಿಸುತ್ತದೆ. ಡೆಡ್‌ ಸ್ಕಿನ್‌ ಅನ್ನು ತೆಗೆದುಹಾಕುತ್ತದೆ. ಹಿಮ್ಮಡಿಗಳು ಮೃದುವಾಗುತ್ತವೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...