alex Certify ಪ್ರತಿದಿನ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಬಳಸುವ ಈರುಳ್ಳಿ ಬಗ್ಗೆ ನಿಮಗೆಷ್ಟು ಗೊತ್ತು….?

ಈರುಳ್ಳಿ. ಬಹುತೇಕರ ಅಚ್ಚುಮೆಚ್ಚು. ಸಲಾಡ್ ನಿಂದ ಹಿಡಿದು ಬಜ್ಜಿಯವರೆಗೆ ಎಲ್ಲ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಬೇಸಿಗೆ, ಚಳಿಗಾಲ ಯಾವುದೇ ಇರಲಿ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಈರುಳ್ಳಿ ಮುಖ್ಯ ತರಕಾರಿಯಲ್ಲ. ಆದರೆ ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುತ್ತದೆ. ಹಾಗಾಗಿಯೇ ಅಡುಗೆ ಮನೆಯಲ್ಲಿ ಈರುಳ್ಳಿಗೆ ವಿಶೇಷ ಜಾಗವಿದೆ.

ಕತ್ತರಿಸುವಾಗ ಕಣ್ಣಲ್ಲಿ ನೀರು ತರಿಸಿದ್ರೂ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಸದಾ ಬೇಡಿಕೆಯಲ್ಲಿರುವ ಈರುಳ್ಳಿ ಬೆಲೆ ಆಗಾಗ ಗಗನಕ್ಕೇರುವುದುಂಟು. ಈರುಳ್ಳಿ, ರಾಜಕೀಯಕ್ಕೂ ನಂಟಿದೆ. ರಾಜ್ಯವೊಂದರ ಸರ್ಕಾರ, ಈರುಳ್ಳಿ ಬೆಲೆ ಏರಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈರುಳ್ಳಿ ಜೊತೆ ನಾವು ಅನೇಕ ವರ್ಷಗಳ ಸಂಬಂಧ ಹೊಂದಿದ್ದೇವೆ. ಸುಮಾರು ಐದು ಸಾವಿರ ವರ್ಷಗಳಿಂದ ಇದನ್ನು ಬೆಳೆಯಲಾಗ್ತಿದೆ. ಮಧ್ಯ ಏಷ್ಯಾದಲ್ಲಿ ಮೊದಲು ಬೆಳೆಯಲಾಯಿತು ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಇದರ ಮೂಲ ಮಧ್ಯಪ್ರಾಚ್ಯ ಎನ್ನುತ್ತಾರೆ. ಭಾರತ ಮತ್ತು ಚೀನಾದಲ್ಲಿ ಸುಮಾರು 5 ಸಾವಿರ ವರ್ಷಗಳಿಂದ ಈರುಳ್ಳಿ ಬೆಳೆಯುತ್ತಿದ್ದಾರೆ.

 ಈರುಳ್ಳಿಯ ವಿಶೇಷವೆಂದರೆ ಅದಕ್ಕೆ ನಿರ್ದಿಷ್ಟ ಹವಾಮಾನ ಅಥವಾ ಭೂಮಿಯ ಅಗತ್ಯವಿಲ್ಲ. ಭಾರತದಲ್ಲಿ ಪ್ರತಿಯೊಂದು ಪ್ರದೇಶದಲ್ಲೂ ಇದನ್ನು ಬೆಳೆಯಲಾಗುತ್ತದೆ. ಇದನ್ನು ದೊಡ್ಡ ಪ್ರಮಾಣದಲ್ಲಿ ಔಷಧದಲ್ಲಿಯೂ ಬಳಸಲಾಗುತ್ತದೆ. ಈರುಳ್ಳಿ ಸುಮಾರು ಶೇಕಡಾ 89 ರಷ್ಟು ನೀರನ್ನು ಹೊಂದಿರುತ್ತದೆ. ಶೇಕಡಾ 9 ರಷ್ಟು ಕಾರ್ಬೋಹೈಡ್ರೇಟ್, ಶೇಕಡಾ 4 ರಷ್ಟು ಸಕ್ಕರೆ ಮತ್ತು ಶೇಕಡಾ 2 ರಷ್ಟು ಫೈಬರ್ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...