alex Certify ಪ್ರತಿದಿನ ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿಕೊಂಡ್ರೆ ದೂರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿಕೊಂಡ್ರೆ ದೂರವಾಗುತ್ತೆ ಇಷ್ಟೆಲ್ಲಾ ಆರೋಗ್ಯ ಸಮಸ್ಯೆ

ಆಲಿವ್‌ ಆಯಿಲ್‌ ಬಳಕೆಯಿಂದ ಚರ್ಮದ ಸೌಂದರ್ಯ ಮತ್ತು ಆರೋಗ್ಯ ಎರಡನ್ನೂ ಹೆಚ್ಚಿಸಿಕೊಳ್ಳಬಹುದು. ಆಲಿವ್‌ ಆಯಿಲ್‌ ತಲೆಕೂದಲಿಗೂ ಪ್ರಯೋಜನಕಾರಿ. ಆಲಿವ್‌ ಆಯಿಲ್‌ ಬಳಸುವುದರಿಂದ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ. ಇನ್ನು ತೂಕ ಇಳಿಸಿಕೊಳ್ಳಲು ಸಹ ಆಲಿವ್ ಆಯಿಲ್‌ ಬಳಸಲಾಗುತ್ತದೆ. ಆದರೆ ಆಲಿವ್‌ ಆಯಿಲ್‌ ಮಸಾಜ್‌ನಿಂದ ಇರುವ ಸಾಕಷ್ಟು ಅನುಕೂಲಗಳ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ.

ಮನಸ್ಸನ್ನು ಶಾಂತವಾಗಿಡುತ್ತದೆ…

ಮಿತವಾಗಿ ಆಲಿವ್ ಆಯಿಲ್‌ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಬಹುದು. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಲ್ಲಿ ಆಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳನ್ನು ನಿವಾರಿಸಬಲ್ಲ ಅಂಶಗಳೂ ಇವೆ. ಇದಲ್ಲದೆ ಆಲಿವ್ ಆಯಿಲ್‌ ಮಸಾಜ್‌ ಮೂಲಕ ಖಿನ್ನತೆಯನ್ನು ಸಹ ಕಡಿಮೆ ಮಾಡಬಹುದು.

ಸಕ್ಕರೆ ಕಾಯಿಲೆ ಇರುವವರಿಗೆ ಪ್ರಯೋಜನಕಾರಿ…

ಆಲಿವ್ ಆಯಿಲ್‌ ಹಚ್ಚಿ ಮಸಾಜ್‌ ಮಾಡುವುದರಿಂದ ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ಸಹ ಕಡಿಮೆ ಮಾಡಬಹುದು. ಇದು ನಿಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಾಪಾಡಿಕೊಳ್ಳಲು ಈ ತೈಲವು ನಿಮಗೆ ಸಹಾಯ ಮಾಡುತ್ತದೆ.

ಊತವನ್ನು ಕಡಿಮೆ ಮಾಡುತ್ತದೆ…

ಆಲಿವ್ ಆಯಿಲ್‌ ದೇಹದ ಉರಿಯೂತವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಊತ ಮತ್ತು ಚರ್ಮ ಕೆಂಪಾದ ಜಾಗದಲ್ಲಿ ಆಲಿವ್‌ ಆಯಿಲ್‌ನಿಂದ ಮಸಾಜ್‌ ಮಾಡಿ. ವಿಶೇಷವಾಗಿ ಸಂಧಿವಾತದಿಂದಾಗುವ ಊತವನ್ನು ಇದು ಕಡಿಮೆ ಮಾಡುತ್ತದೆ.

ತೂಕ ಕಡಿಮೆ ಮಾಡಬಹುದು…

ಆಲಿವ್ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದರಿಂದ ತೂಕವನ್ನು ಕಡಿಮೆ ಮಾಡಬಹುದು. ನಿತ್ಯವೂ ಈ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಮನಸ್ಸು ನಿರಾಳವಾಗುತ್ತದೆ. ಇದು ನಿಮ್ಮ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿದ್ರಾಹೀನತೆಯ ಸಮಸ್ಯೆ ಇದ್ದರೆ ತೂಕ ಹೆಚ್ಚಾಗುವ ಅಪಾಯವಿದೆ. ಹಾಗಾಗಿ ಆಲಿವ್‌ ಆಯಿಲ್‌ ಮಸಾಜ್‌ ಮೂಲಕ ಚೆನ್ನಾಗಿ ನಿದ್ರಿಸಿ, ತೂಕ ಕಡಿಮೆ ಮಾಡಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...