
ಭೂಮಿದಿನವಾದ ಇಂದು ತಾನು ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಸಂಭ್ರಮದ ಫೋಟೋಗಳನ್ನು ಕೂಡ ಹಂಚಿಕೊಳ್ಳಿ ಎಂದು ಫೋಟೋ ಪೋಸ್ಟ್ ಮಾಡುತ್ತಾ ಮಹೀಂದ್ರಾ ಗ್ರೂಪ್ ನ ಮುಖ್ಯಸ್ಥರು ಶೀರ್ಷಿಕೆ ಬರೆದಿದ್ದಾರೆ.
ಉದ್ಯಮಿ ಮಹೀಂದ್ರಾ ಅವರು ತಮ್ಮ ವೈಯಕ್ತಿಕ ಗ್ಯಾಲರಿಯಿಂದ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದು ಕಡಲತೀರ, ಪರ್ವತ ಮತ್ತು ಸುಂದರವಾದ ಭೂದೃಶ್ಯಗಳನ್ನು ಒಳಗೊಂಡಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ವೈಯಕ್ತಿಕ ಸಂಗ್ರಹಗಳಿಂದ ಪ್ರಕೃತಿಯ ಸೊಗಸಾದ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಹಲವಾರು ಮಂದಿ ಟ್ವೀಟಿಗರು ತಾವು ತೆಗೆದಿರುವ ಪ್ರಕೃತಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ 22 ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ಗೂಗಲ್ ಡೂಡಲ್ ಜಾಗೃತಿ ಮೂಡಿಸಲು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಲಾಕೃತಿಯನ್ನು ಹಂಚಿಕೊಂಡಿದೆ.
https://twitter.com/Anubhutimusings/status/1517379351574368259?ref_src=twsrc%5Etfw%7Ctwcamp%5Etweetembed%7Ctwterm%5E1517379351574368259%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-his-personal-collection-of-beautiful-pics-on-earth-day-2022-netizens-contribute-too-1940634-2022-04-22