ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ 08-06-2021 10:03AM IST / No Comments / Posted In: Latest News, India, Live News, Tourism ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….? ಇದೀಗ ರಾಜ್ಯದ ಉಪಮುಖ್ಯಮಂತ್ರಿ ಚೌನಾ ಮೇಯ್ನ್ ಅಲ್ಲಿನ ಅಪ್ಪರ್ ಸಿಯಾಂಗ್ ಜಿಲ್ಲೆಯ ಸೌಂದರ್ಯ ಸಾರುವ ಅನೇಕ ಚಿತ್ರಗಳನ್ನು ಶೇರ್ ಮಾಡಿದ್ದು, ನೆಟ್ಟಿಗರಿಗೆ ಇವು ಹುಚ್ಚು ಹಿಡಿಸಿವೆ. ಎರಡು ಬ್ಯಾಂಕ್ ಗಳ ಖಾಸಗೀಕರಣಕ್ಕೆ ಕೇಂದ್ರದ ಸಿದ್ಧತೆ “ಕಣ್ಮನ ಸೆಳೆಯುವ ಈ ಚಿತ್ರ ಕಾಶ್ಮೀರದಲ್ಲೆಲ್ಲೋ ಇಲ್ಲ ಆದರೆ ಇದು ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್. ಎಕೋ ಡಂಬಿಂಗ್ ಎಂದು ಸ್ಥಳೀಯರಿಂದ ಕರೆಯಲ್ಪಡುವ ಈ ಸ್ಥಳ ತಲುಪಲು, ಚೀನಾ ಗಡಿ ಬಳಿ ಇರುವ ರಸ್ತೆಯೊಂದರಿಂದ ಟ್ರೆಕ್ಕಿಂಗ್ ಮಾಡಿಕೊಂಡು ಸಾಗಿದಲ್ಲಿ 3-4 ದಿನಗಳು ಬೇಕು” ಎಂದು ಮೇಯ್ನ್ ಟ್ವಿಟ್ಟರ್‌ನ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. This picturesque place is not somewhere in Kashmir but in Upper Siang District of Arunachal Pradesh. Called Eko Dumbing by the locals, it takes 3-4 days trekking from the last motorable road near China border. #dekhoapnapradeshSource: FB post by #ArunachalWildlifeExplorative pic.twitter.com/jqNTK7Z2dl — Chowna Mein (Modi Ka Parivar) (@ChownaMeinBJP) June 6, 2021