
ಗ್ವಾಲಿಯರ್ ನಗರವು ಸ್ವಚ್ಛತೆಯ ವಿಚಾರದಲ್ಲಿ ಸತತವಾಗಿ ಹಿಂದುಳಿದಿದೆ. ಈ ವರ್ಷ ನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣ್ ಅಡಿಯಲ್ಲಿ ಗ್ವಾಲಿಯರ್ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಪೌರ ಕಾರ್ಮಿಕರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದೆ.
ಗ್ವಾಲಿಯರ್ ಮುನ್ಸಿಪಲ್ ಕಾರ್ಪೋರೇಷನ್ ಆಯೋಜಿಸಿದ್ದ ಸ್ವಚ್ಛತಾ ಸಮ್ಮಾನ್ ಸಮಾರಂಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಭಾಗವಹಿಸಿದ್ದರು. ಕಾರ್ಯಕ್ರಮದ ವೇಳೆಯಲ್ಲಿ ವೇದಿಕೆಯಿಂದ ಕೆಳಗಿಳಿದ ಸಿಂಧಿಯಾ ಬಬಿತಾ ಎಂಬ ಪೌರ ಕಾರ್ಮಿಕೆಯನ್ನು ವೇದಿಕೆಗೆ ಕರೆ ತಂದಿದ್ದಾರೆ.
ಬಬಿತಾರಿಗೆ ಶಾಲು ನೀಡಿ ಗೌರವಿಸಿದ ಸಿಂಧಿಯಾ ಬಳಿಕ ಅವರ ಪಾದವನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.