alex Certify ಪೋಷಕಾಂಶಗಳು ಹೇರಳವಾದ ʼಹಾಲುʼ ಯಾವುದು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕಾಂಶಗಳು ಹೇರಳವಾದ ʼಹಾಲುʼ ಯಾವುದು ಗೊತ್ತಾ…..?

ಮೇಕೆ ಹಾಲು ಕುಡಿದರೆ ಜಾಣರಾಗುತ್ತೀರಿ, ಎಮ್ಮೆ ಹಾಲು ಕುಡಿದರೆ ಮಂದ ಬುದ್ದಿ ಪಡೆಯುತ್ತೀರಿ ಎಂದು ಹಿರಿಯರು ಹೇಳುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಸತ್ಯ ಏನು ಗೊತ್ತೇ…?

ಹಾಲಿನಲ್ಲಿ ಕೊಬ್ಬಿನಾಂಶ ಮತ್ತು ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಹೇಗಿದ್ದರೂ ಹಾಲು ಅರೋಗ್ಯಕಾರಿ. ಮಕ್ಕಳಿಗೂ ಹಿರಿಯರಿಗೂ ಕ್ಯಾಲ್ಸಿಯಂ ಸೇರಿದಂತೆ ಹಲವು ವಿಟಮಿನ್ ಗಳನ್ನು ಇದು ಒದಗಿಸುತ್ತದೆ.

ಎಮ್ಮೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲರಿ ಇದೆ. ಹಸುವಿನ ಹಾಲಿನಲ್ಲಿ ಸ್ವಲ್ಪ ಕಡಿಮೆ. ಹಾಗಾಗಿ ತೂಕ ಇಳಿಸಲು ಬಯಸುವವರು ಇದನ್ನು ಆಯ್ದುಕೊಳ್ಳುವುದು ಉತ್ತಮ. ಹಾಲಿನಲ್ಲಿ ಇರುವ ಪ್ರೊಟೀನ್ ಮೂಳೆಗಳನ್ನು ಬಲಪಡಿಸಿ ನಿರ್ಜಲೀಕರಣದಿಂದ ದೇಹವನ್ನು ರಕ್ಷಿಸುತ್ತದೆ.

ಹಸುವಿನ ಹಾಲಿನಲ್ಲಿ ಮೆದುಳಿನ ಸರಾಗ ಕ್ರಿಯೆಗೆ ಸಹಾಯವಾಗುವ ಸಲ್ಫರ್ ಅಂಶವಿದೆ. ಇದರಲ್ಲಿ ವಿಟಮಿನ್ ಎ ಕೂಡಾ ದೇಹಕ್ಕೆ ದೊರೆಯುತ್ತದೆ. ಇವು ಎಮ್ಮೆಯ ಹಾಲಿನಲ್ಲಿಲ್ಲ. ಎಮ್ಮೆ ಹಾಲು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮಕ್ಕಳಿಗೆ ಇದನ್ನು ನೀಡದಿರುವುದು ಒಳ್ಳೆಯದು. ಎಮ್ಮೆಯ ಹಾಲಿನಿಂದ ಅತ್ಯುತ್ತಮವಾಗಿ ಮೊಸರು, ಪನ್ನೀರ್, ಕೋವಾ ತಯಾರಿಸಬಹುದು.

ಹಾಲಿನ ಅಲರ್ಜಿ ಇರುವವರು ಮಾತ್ರ ವೈದ್ಯರ ಸಲಹೆ ಪಡೆದೇ ಹಾಲು ಅಥವಾ ಅದರ ಇತರ ಉತ್ಪನ್ನಗಳನ್ನು ಸೇವಿಸಬೇಕು. ಅದರೆ ಪ್ರತಿನಿತ್ಯ ಹಾಲು ಕುಡಿಯುವುದು ಮಾತ್ರ ಬಹಳ ಮುಖ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...