alex Certify ಪೋಷಕರಿಗಾಗಿ ಅವರಿಷ್ಟದ ಅಮೂಲ್ಯ ಕ್ಷಣದ ಉಡುಗೊರೆ ನೀಡಿದ ಪುತ್ರ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರಿಗಾಗಿ ಅವರಿಷ್ಟದ ಅಮೂಲ್ಯ ಕ್ಷಣದ ಉಡುಗೊರೆ ನೀಡಿದ ಪುತ್ರ…..!

ನಾವು ನಮ್ಮ ಹೆತ್ತವರಿಗಾಗಿ ಏನನ್ನಾದರೂ ಮಾಡಿದ್ರೆ ಅದು ಯಾವಾಗಲೂ ಹೆಮ್ಮೆಯ ಕ್ಷಣವಾಗಿರುತ್ತದೆ. ಅಮೆರಿಕಾದಲ್ಲಿ ನೆಲೆಸಿರುವ ಅಸೋಸಿಯೇಟ್ ಪ್ರೊಫೆಸರ್ ಗೌರವ್ ಸಬ್ನಿಸ್ ಅವರೂ ಇದನ್ನೇ ಮಾಡಿದ್ದಾರೆ. ಪುತ್ರನನ್ನು ಭೇಟಿ ಮಾಡಲು ಭಾರತದಿಂದ ಮೊದಲ ಬಾರಿಗೆ ಬಿಸಿನೆಸ್ ಕ್ಲಾಸ್ ಫ್ಲೈಟ್ ಅನ್ನು ಬುಕ್ ಮಾಡುವ ಮೂಲಕ ಅವರು ತಮ್ಮ ಪೋಷಕರಿಗೆ ಒಂದು ಅಮೂಲ್ಯ ಕ್ಷಣವನ್ನು ನೀಡಿದ್ದಾರೆ.

ಈ ಸಂಬಂಧ ಗೌರವ್ ಅವರು ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಂತಿಮವಾಗಿ ತಮ್ಮ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ಕಾಯ್ದಿರಿಸಲು ಸಾಧ್ಯವಾದ ಬಗ್ಗೆ ಸಂತೋಷದಿಂದ ಸುದೀರ್ಘವಾಗಿ ವಿವರಿಸಿದ್ದಾರೆ. ಇದರಲ್ಲಿ ಅವರು, ಆರಾಮಾಗಿ ಕುಳಿತುಕೊಂಡು ಮಾತ್ರವಲ್ಲದೆ, ಮಲಗಿಕೊಳ್ಳಬಹುದಾಗಿದೆ.

ಮೊದಲ ಬಾರಿಗೆ ಭಾರತದಿಂದ ನಮ್ಮನ್ನು ಭೇಟಿ ಮಾಡಲು ಪೋಷಕರಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಸಣ್ಣ-ಸಣ್ಣ ವಿಚಾರಗಳಲ್ಲಿ ತನ್ನ ತಾಯಿ ಹೇಗೆ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ಅವರು ಮತ್ತಷ್ಟು ವಿವರಿಸಿದ್ದಾರೆ. ತನ್ನ ತಾಯಿಯನ್ನು ಉತ್ಸಾಹಿ ಪ್ರಯಾಣಿಕ ಎಂದು ಕರೆದ ಅವರು, ತನ್ನ ಬಾಲ್ಯದಲ್ಲಿ, ಶೌಚಾಲಯದ ಅನಾನುಕೂಲತೆಯ ಕಾರಣದಿಂದ ತಾಯಿ ಬಸ್ ಪ್ರಯಾಣದ ಸಮಯದಲ್ಲಿ ನೀರು ಕುಡಿಯಲು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಅವರು ಯುಎಸ್‌ಗೆ ಭೇಟಿ ನೀಡಿದಾಗ ಮೊದಲ ಬಾರಿಗೆ ಗ್ಯಾಸ್ ಸ್ಟೇಷನ್‌ಗಳಲ್ಲಿ ಸ್ವಚ್ಛ ಮತ್ತು ಸುರಕ್ಷಿತ ವಾಶ್‌ರೂಮ್‌ಗಳನ್ನು ಬಳಸುವ ಸಂಸ್ಕೃತಿಯನ್ನು ಅವರ ತಾಯಿ ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ.

ಗೌರವ್ 2020 ರ ಏಪ್ರಿಲ್‌ನಲ್ಲಿ ತನ್ನ ಹೆತ್ತವರನ್ನು ಬಿಸಿನೆಸ್ ಕ್ಲಾಸ್‌ನಲ್ಲಿ ಅಮೆರಿಕಾಗೆ ಕರೆತರಬೇಕು ಎಂದು ಯೋಜಿಸಿದ್ದರು. ಕೊರೋನಾ ಕಾರಾಣದಿಂದ ಇದು ಸಾಧ್ಯವಾಗಲಿಲ್ಲ. ಅಂತಿಮವಾಗಿ ತನ್ನ ಹೆತ್ತವರಿಗೆ ಬಯಸಿದ ಏನನ್ನಾದರೂ ಉಡುಗೊರೆಯಾಗಿ ನೀಡಲು ತೀರ್ಮಾನಿಸಿ, ಬಿಸಿನೆಸ್ ಕ್ಲಾಸ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...