alex Certify ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದು, ಆಕೆಯೇ ಪೊದೆಗೆ ಮಗುವನ್ನು ಎಸೆದಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲ, ತಮ್ಮ ಮಗಳು ಮದುವೆಗೂ ಮುನ್ನವೇ ಮಗು ಹೆತ್ತ ಕಾರಣ ಆಕೆಯ ಪೋಷಕರು ವಿಷವುಣಿಸಿ ಯುವತಿಯನ್ನು ಹತ್ಯೆ ಮಾಡಿರುವ ಸಂಗತಿಯೂ ಬಯಲಾಗಿದೆ.

ಇಂತಹದೊಂದು ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದ್ದು, ಡಿಸೆಂಬರ್ 5 ರಂದು ಅಲ್ಲಿನ ಕಾಲುವೆಯ ಪೊದೆಯೊಂದರ ಬಳಿ ನವಜಾತ ಶಿಶು ಪತ್ತೆಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಮಗುವನ್ನು ರಕ್ಷಿಸಿದ್ದ ಪೊಲೀಸರು ಚಿಕಿತ್ಸೆಗಾಗಿ ತಿರುಚ್ಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ ಮಗು ಯಾರದಿರಬಹುದು ಎಂಬುದನ್ನು ಪತ್ತೆ ಮಾಡುವ ಸಲುವಾಗಿ ಕಾರ್ಯಾಚರಣೆ ನಡೆಸಿದ್ದರು.

ಈ ವೇಳೆ ಯುವತಿ ಒಬ್ಬಳು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಸಂಗತಿ ಅವರಿಗೆ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮಗುವಿನ ತಾಯಿ ಆ ಯುವತಿಯೇ ಎಂಬುದು ಗೊತ್ತಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹೋದಾಗ ಆಕೆ ಸಾವನ್ನಪ್ಪಿದ್ದಳು. ಆದರೆ ಯುವತಿ ಸಾವು ಮರ್ಯಾದೆಗೇಡು ಹತ್ಯೆ ಪ್ರಕರಣ ಇರಬಹುದು ಎಂಬ ಶಂಕೆ ಪೊಲೀಸರನ್ನು ಕಾಡುತ್ತಿತ್ತು.

ಹೆಚ್ಚಿನ ಮಾಹಿತಿ ಕಲೆ ಹಾಕಿದ ವೇಳೆ ಯುವತಿಯ ತಂದೆ, ತಮ್ಮ ಮಗಳು ಮದುವೆಗೂ ಮುಂಚೆಯೇ ಮಗುವಿಗೆ ಜನ್ಮ ನೀಡಿದ ಕಾರಣ ಆಕೆಗೆ ವಿಷ ನೀಡಿ ಸಾವಿಗೆ ಕಾರಣವಾಗಿರುವುದು ಗೊತ್ತಾಗಿದೆ. ಅಲ್ಲದೆ ಯುವತಿ ಚಿಕ್ಕಮ್ಮ ಕೂಡ ಅದಕ್ಕೆ ಸಹಕರಿಸಿರುವುದು ಕಂಡುಬಂದಿದೆ. ಇದೀಗ ಯುವತಿಯ ತಂದೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...