alex Certify ಪುಸ್ತಕ ಮೇಳದಲ್ಲಿ ಪಿಕ್‌ ಪಾಕೆಟ್ ಮಾಡುತ್ತಿದ್ದ ನಟಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಸ್ತಕ ಮೇಳದಲ್ಲಿ ಪಿಕ್‌ ಪಾಕೆಟ್ ಮಾಡುತ್ತಿದ್ದ ನಟಿ ಅರೆಸ್ಟ್

ಕೋಲ್ಕತ್ತಾ: ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಜೇಬುಗಳ್ಳತನ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ.

ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಈ ಘಟನೆ ನಡೆದಿದೆ. ನಟಿಯ ಬ್ಯಾಗ್‌ನಿಂದ 65,760 ರೂ. ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ರೂಪಾ ಅವರು ಯಾವುದೇ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ವಿಚಾರಣೆ ನಡೆಸಿದಾಗ, ಕಿಕ್ಕಿರಿದ ಜನಸಮೂಹದ ಮಧ್ಯೆ ತಾನು ಪಾಕೆಟ್ ಪಿಕ್ ಮಾಡುತ್ತಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಹಾಗಂತ ಆಕೆ ಕಳ್ಳತನ ಮಾಡಿದ್ದು ಇದೇ ಮೊದಲಲ್ಲ ಎಂದು ಪೊಲೀಸರು ಹೇಳಿದ್ದಾರೆ.

ನಟಿಯ ಬ್ಯಾಗ್‌ನಲ್ಲಿದ್ದ ಡೈರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದನ್ನು ನಟಿ ತನ್ನ ಕಳ್ಳತನದ ಖಾತೆಯನ್ನು ನಿರ್ವಹಿಸಲು ಬಳಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಆಕೆಯ ಡೈರಿಯಲ್ಲಿ ಕೋಲ್ಕತ್ತಾದ ಕೆಲವು ಜನನಿಬಿಡ ಸ್ಥಳಗಳ ಹೆಸರುಗಳಿವೆ ಎಂದು ತಿಳಿದು ಬಂದಿದೆ. ಅವು ಬಹುಶಃ ರೂಪಾಳ ಗುರಿಗಳಾಗಿವೆ.

ಶನಿವಾರದಂದು ನಡೆದ ಪುಸ್ತಕ ಮೇಳದಲ್ಲಿ ಮೈದಾನದೊಳಗೆ ಆಕೆಯ ಚಲನವಲನವು ಪೊಲೀಸರಿಗೆ ಅನುಮಾನವನ್ನು ಹುಟ್ಟುಹಾಕಿತು. ಏಕೆಂದರೆ, ರೂಪಾ ಕೆಲವು ಪರ್ಸ್ ಗಳನ್ನು ಕಸದ ತೊಟ್ಟಿಗೆ ಎಸೆಯುತ್ತಿದ್ದರು. ಪೊಲೀಸರು ಆಕೆಯ ಬ್ಯಾಗ್‌ನಿಂದ ಹಲವಾರು ಪರ್ಸ್ ಗಳನ್ನು ವಶಪಡಿಸಿಕೊಂಡು, ರೂಪಾಳನ್ನು ಬಂಧಿಸಿದ್ದಾರೆ. ನಟಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379/411 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...