alex Certify ‘ಪುಷ್ಪ’ ಚಿತ್ರದ ಖಳನಾಯಕನ ಫಸ್ಟ್ ಲುಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪ’ ಚಿತ್ರದ ಖಳನಾಯಕನ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರವನ್ನು ತೆರೆಮೇಲೆ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ ಪುಷ್ಪ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಫಹಾದ್ ಫಾಸಿಲ್ ಅವರ ಪೋಸ್ಟರ್ ವೊಂದನ್ನು ಇಂದು ಬಿಡುಗಡೆ ಮಾಡಲಾಗಿದೆ ಈಗಾಗಲೇ ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪುಷ್ಪ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಇಂದು ರಿಲೀಸ್ ಮಾಡಿರುವ ಫಹಾದ್ ಫಾಸಿಲ್ ಅವರ ಫಸ್ಟ್ ಲುಕ್ ಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ ಭನ್ವರ್ ಸಿಂಗ್ ಶೇಖಾವತ್ ಎಂಬ ips ಪಾತ್ರದಲ್ಲಿ ಫಹಾದ್ ಫಾಸಿಲ್ ಅಭಿನಯಿಸಿದ್ದಾರೆ.

BIG NEWS: ಸಿಇಟಿ: 12 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು ಕ್ರಿಸ್ಮಸ್ ಹಬ್ಬದಂದು ತೆರೆ ಮೇಲೆ ಅಬ್ಬರಿಸಲು ಈ ಸಿನಿಮಾ ಸಜ್ಜಾಗಿದೆ. ಪ್ರಕಾಶ್ ರಾಜ್, ಅನಸೂಯ ಭಾರದ್ವಾಜ್, ದೀಪಕ್ ಶೆಟ್ಟಿ, ಹಾಗೂ ಕನ್ನಡದ ಡಾಲಿ ಧನಂಜಯ್, ಸೇರಿದಂತೆ ಹಲವಾರು ಕಲಾವಿದರು ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತವಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...