alex Certify ‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪಾ’ ಸ್ಟಾರ್ ಅಲ್ಲು ಅರ್ಜುನ್ ಡೈಲಾಗ್ ಮರುಸೃಷ್ಟಿಸಿದ ಹೂ ವ್ಯಾಪಾರಿ…..!

Kashmiri Flower-seller Recreates Pushpa Star Allu Arjun Viral Flower Samjhe  Kya Dialogue | Watch: कश्मीरी फ्लावर-सेलर पर चढ़ा 'पुष्पा' का खुमार,  मजाकिया अंदाज में दी डायलॉग पर ...ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್ ಸಿನಿಮಾ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳಾಗಿದೆ. ಇನ್ನೂ ಚಿತ್ರದ ಸಂಭಾಷಣೆಗಳು, ಹಾಡುಗಳ ಬಗ್ಗೆ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ಅಲ್ಲು ಅವರ ಕಾಶ್ಮೀರದ ಅಭಿಮಾನಿಯೊಬ್ಬರ ಚಿತ್ರದ ಪ್ರಮುಖ ಡೈಲಾಗ್ ಅನ್ನು ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಕಾಶ್ಮೀರದಿಂದ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಟ್ವಿಟ್ಟರ್ ಬಳಕೆದಾರರಾದ ನಮ್ರತಾ, ಇದೀಗ ಹೂವು ಮಾರಾಟಗಾರನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಂಭಾಷಣೆಯನ್ನು ಹೂ ಮಾರಾಟಗಾರ ಮರುಸೃಷ್ಟಿಸಿದ್ದಾರೆ. ಯಾರೋ ಪುಷ್ಪಾ ಅವರನ್ನು ಹೂವು ಎಂದು ತಪ್ಪಾಗಿ ಗ್ರಹಿಸಿದ್ದಾರೆ, ಪುಷ್ಪ ಅಂದ್ರೆ ಅಗ್ನಿ ಎಂಬ ಸಂಭಾಷಣೆಯನ್ನು ಅವರು ಮರುಸೃಷ್ಟಿಸಿದ್ದಾರೆ..

ಸುಂದರವಾದ ದಾಲ್ ಸರೋವರದ ಮುಂದೆ, ವರ್ಣರಂಜಿತ ಹೂವುಗಳಿಂದ ತುಂಬಿದ ಶಿಕಾರದಲ್ಲಿ ಹೂವು ಮಾರಾಟಗಾರ ಅಲ್ಲು ಅರ್ಜುನ್ ಅವರ ಪುಷ್ಪ ಚಿತ್ರದ ಸಂಭಾಷಣೆಯನ್ನು ಹೇಳಿದ್ದಾರೆ. ಇದೀಗ, ಕಾಶ್ಮೀರಿ ಹೂವು-ಮಾರಾಟಗಾರನ ಪುಷ್ಪಾ ವಿಡಿಯೋವನ್ನು ಇಂಟರ್ನೆಟ್ ಆನಂದಿಸಿದ್ದು, ಅದು ವೇಗವಾಗಿ ವೈರಲ್ ಆಗುತ್ತಿದೆ.

— Namrata (@SrinagarGirl) April 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...