ಬಾಲಿಯ ದೇವಸ್ಥಾನವೊಂದರಲ್ಲಿ 700 ವರ್ಷಗಳಷ್ಟು ಹಳೆಯದಾದ ಪವಿತ್ರ ವೃಕ್ಷದ ಪಕ್ಕದಲ್ಲಿ ಬೆತ್ತಲೆಯಾಗಿ ಪೋಸ್ ಕೊಟ್ಟಿದ್ದಕ್ಕಾಗಿ ರಷ್ಯಾದ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಗೆ ಆರು ವರ್ಷಗಳ ಜೈಲು ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡವನ್ನುವಿಧಿಸಲಾಗಿದೆ.
ತಬಾನಮ್‌ನ ಬಾಬಕನ್ ದೇವಾಲಯದಲ್ಲಿರುವ ಈ ಮರಕ್ಕೆ ಕೇಯು ಪುತಿಹ್ ಎಂದು ಕರೆಯಲಾಗುತ್ತದೆ. ಇದು ಶತಮಾನಗಳಷ್ಟು ಹಳೆಯದಾದ ಮರವಾಗಿದೆ. ಹೀಗಾಗಿ ಈ ಮರಕ್ಕೆ ಅಲ್ಲಿನ ಸ್ಥಳೀಯರು ಪವಿತ್ರ ಸ್ಥಾನಮಾನವನ್ನು ನೀಡಿ ದೇವರಂತೆ ಕಾಣುತ್ತಾರೆ. ಇಂತಹ ಮರದಲ್ಲಿ ಅಲೀನ್ ಫಜ್ಲೀವಾ ಬೆತ್ತಲೆ ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣರಾಗಿದ್ದಾರೆ .
ಇನ್ಸ್ಟಾಗ್ರಾಂನಲ್ಲಿ 16 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಅಲೀನಾ ಫಜ್ಲೀವಾಗೆ ಅಶ್ಲೀಲತೆಯ ಆರೋಪದ ಅಡಿಯಲ್ಲಿ ಸುದೀರ್ಘ ಅವಧಿಗೆ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬರಬಹುದು. ಬಲನೀಸ್ನ ಉದ್ಯಮಿ ನಿಲುಹ್ ಡಿಜೆಲಾಂಟಿಕ್ ಈ ಫೋಟೋಗಳನ್ನು ನೋಡಿ ಕಾನೂನು ಸಮರಕ್ಕೆ ಮುಂದಾಗಿದ್ದರು.