alex Certify ಪುತ್ರನ ಎದುರಲ್ಲೇ ಉಕ್ರೇನ್ ಮಹಿಳೆ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ..!‌ ಪೈಶಾಚಿಕ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಎದುರಲ್ಲೇ ಉಕ್ರೇನ್ ಮಹಿಳೆ ಮೇಲೆ ರಷ್ಯಾ ಸೈನಿಕರಿಂದ ಅತ್ಯಾಚಾರ..!‌ ಪೈಶಾಚಿಕ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ

ತನ್ನ ಪತಿಯನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಉಕ್ರೇನ್​ನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದ್ದ ವೇಳೆಯಲ್ಲಿ ನನ್ನ ಪುತ್ರ ಅಳುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.

ನಾನು ಮೊದಲು ಗುಂಡಿನ ಶಬ್ದವನ್ನು ಕೇಳಿದೆ. ಬಳಿಕ ಗೇಟನ್ನು ತೆರೆಯುವ ಶಬ್ದ ಹಾಗೂ ಅವರ ಹೆಜ್ಜೆ ಸದ್ದುಗಳನ್ನು ಕೇಳಿದೆ ಎಂದು ಮಹಿಳೆ ಹೇಳಿದ್ದಾರೆ.

ರಷ್ಯಾದ ಸೈನಿಕರು ಮೊದಲು ನಮ್ಮ ಸಾಕು ಶ್ವಾನವನ್ನು ಕೊಂದರು. ಬಳಿಕ ನನ್ನ ಪತಿಯನ್ನು ಕೊಂದರು. ನಾನು ನನ್ನ ಪತಿ ಎಲ್ಲಿ ಎಂದು ಕೇಳುತ್ತಲೇ ಇದ್ದೆ. ನಾನು ಗೇಟಿನ ಬಳಿ ಬಂದು ನೋಡಿದಾಗ ನನ್ನ ಪತಿಯ ಶವ ಕಾಣಿಸಿತು. ಬಳಿಕ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರಗೈದರು. ನನಗೆ ವಿರೋಧವೊಡ್ಡದಂತೆ ಗನ್​ ಹಿಡಿದು ಬೆದರಿಸಿದರು. ನೀನು ಸುಮ್ಮನೇ ಇರದಿದ್ದರೆ ನಿನ್ನ ಮೆದುಳನ್ನು ಮನೆಯ ತುಂಬಾ ಚೆಲ್ಲುವ ಮೂಲಕ ನಿನ್ನ ಮಗುವಿಗೆ ತೋರಿಸುತ್ತೇನೆ ಎಂದು ಹೆದರಿಸಿದರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...