alex Certify ಪುಟ್ಟ ಮಗುವನ್ನು ನಗಿಸುವುದು ಹೇಗೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವನ್ನು ನಗಿಸುವುದು ಹೇಗೆ….?

ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೊಗದ ಮೇಲೆ ನಗು ಮೂಡಿಸಿಕೊಂಡು ಹೆತ್ತವರನ್ನು ಖುಷಿ ಪಡಿಸುತ್ತವೆ. ಅದರೆ ಅದು ಪ್ರಯತ್ನಪೂರ್ವಕವಾಗಿ ನಗುವ ನಗುವಲ್ಲ. ತನ್ನ ಪರಿಚಿತರನ್ನು ಕಂಡು ಸಂತಸ ವ್ಯಕ್ತಪಡಿಸುವಾಗ ಮುಖದ ಮೇಲೆ ಮೂಡುವ ಕಿರುನಗೆಯೇ ನಿಜವಾದ ನಗು. ಇದು ಸಹಜವಾಗಿ ಕಾಣಿಸಿಕೊಳ್ಳಲು ಸಾಮಾನ್ಯವಾಗಿ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ.

ಕ್ರಮೇಣ ಮಗು ತಮಗೆ ಆತ್ಮೀಯರನ್ನು ಕಂಡಾಗ ನಗಲು ಪ್ರಾರಂಭಿಸುತ್ತದೆ. ಕಾಲಿಗೆ, ಕಂಕುಳಿಗೆ ಕಚಗುಳಿ ಇಟ್ಟಾಗ ಮುಖ ಅರಳಿಸುತ್ತದೆ. ಇದಕ್ಕೆಲ್ಲಾ ಹೆತ್ತವರು ಮಗುವಿನ ಸಾಮಿಪ್ಯದಲ್ಲಿರಬೇಕು. ಮಗುವನ್ನು ಕಂಡಾಗ ಕಣ್ಣು ಮಿಟುಕಿಸುವುದು, ನಗುವುದು, ಕಣ್ಣಾಮುಚ್ಚಾಲೆ ಮಾಡುವುದು, ಕಚಗುಳಿ ಇಡುವುದು ಮಾಡುತ್ತಿರಬೇಕು. ಇದು ಮಗುವಿನ ಸಂವಹನ ಪ್ರಕ್ರಿಯೆಯನ್ನು ಪ್ರೇರೇಪಿಸುತ್ತದೆ.

ಮಗು ಬಾಯಿ ತುಂಬಾ ನಗುತ್ತದೆ ಎಂದರೆ ಅದು ನೋಡಿದ್ದನ್ನು ಗ್ರಹಿಸುತ್ತದೆ ಎಂದರ್ಥ. ಮಗು ನಿಮ್ಮನ್ನು ಸರಿಯಾಗಿ ಗುರುತು ಹಿಡಿದ ಬಳಿಕವೇ ಅಳುವುದು, ನಗುವುದನ್ನು ರೂಢಿ ಮಾಡಿಕೊಳ್ಳುತ್ತದೆ.

ಮಗು ಕ್ರಮೇಣ ತನ್ನ ಅಳು, ನಗುವಿನ ಮೂಲಕ ಭಾವನೆಯನ್ನು ವ್ಯಕ್ತಪಡಿಸಲು ಆರಂಭಿಸುತ್ತದೆ. ಕಚಗುಳಿ ಇಟ್ಟ ಬಳಿಕ ನೀವು ದೂರ ಹೋದರೆ ಮತ್ತೆ ಬರಬೇಕೆಂದು ಅಳತೊಡಗುತ್ತದೆ. ಮೂರು ತಿಂಗಳಾದರೂ ಮಗು ಈ ಚಟುವಟಿಕೆಗಳನ್ನು ಆರಂಭಿಸದಿದ್ದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕಾದೀತು. ಅದಕ್ಕೂ ಮುನ್ನ ಮಗುವನ್ನು ಸಂವಹನ ಕ್ರಿಯೆಗೆ ಪ್ರೇರೇಪಿಸುವುದು ಬಹಳ ಮುಖ್ಯ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...