alex Certify ಪುಟ್ಟ ಬಾಲಕ ತನ್ನ ಸೈಕಲ್​ ನಿಲ್ಲಿಸಿದ ಪರಿ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕ ತನ್ನ ಸೈಕಲ್​ ನಿಲ್ಲಿಸಿದ ಪರಿ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು..!

ಪಾರ್ಕಿಂಗ್​ ಲಾಟ್​ಗಳಲ್ಲಿ ನಮ್ಮ ವಾಹನಗಳನ್ನು ಪಾರ್ಕ್ ಮಾಡುವುದೇ ಕಷ್ಟ ಎಂದು ಅನೇಕರು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕ ತನ್ನ ಸೈಕಲ್​ನ್ನು ಪಾರ್ಕ್​ ಮಾಡಿದ ರೀತಿಯನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ವಿಡಿಯೋದಲ್ಲಿ ಸರಿ ಸುಮಾರು ಆರು ವರ್ಷದ ಬಾಲಕ ಪಾರ್ಕಿಂಗ್​ ಲಾಟ್​ನಲ್ಲಿ ತನ್ನ ಸೈಕಲ್​ ನಿಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. ಕಾರು ಚಾಲಕನೊಬ್ಬ ತನ್ನ ಕಾರನ್ನು ನಿಗದಿ ಪಡಿಸಿದ ಜಾಗದಲ್ಲಿ ಪಾರ್ಕ್​ ಮಾಡಲು ಯತ್ನಿಸುತ್ತಿದ್ದರೂ ಸಹ ಇದರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಬಾಲಕ ಕಾರಿಗೆಂದು ಮೀಸಲಿಡಲಾಗಿದ್ದ ಜಾಗದಲ್ಲಿ ತನ್ನ ಸೈಕಲ್​ನ್ನು ಪಾರ್ಕ್ ಮಾಡಿದ್ದಾನೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್​ ಸಂಪಾದಿಸಿದೆ.

— Buitengebieden (@buitengebieden_) March 2, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...