
ಹೌದು, ಸುದ್ದಿ ನಿರೂಪಕಿಯು ತನ್ನ ಪುಟ್ಟ ಕಂದಮ್ಮನ ಜೊತೆಗೆ ಹವಾಮಾನ ಮುನ್ಸೂಚನೆ ಓದಿರುವ ವಿಡಿಯೋ ವೈರಲ್ ಆಗಿದೆ. ಯುಎಸ್‌ನ ವಿಸ್ಕಾನ್ಸಿನ್‌ನ ರೆಬೆಕ್ಕಾ ಶುಲ್ಡ್, ಸಿಬಿಎಸ್ 58 ನ್ಯೂಸ್‌ನಲ್ಲಿ ಹವಾಮಾನ ಮುನ್ಸೂಚನೆ ಓದುತ್ತಿರುವಾಗ ತನ್ನ ಮೂರು ತಿಂಗಳ ಮಗುವನ್ನು ತೋಳುಗಳಲ್ಲಿ ಹಿಡಿದುಕೊಂಡು ನಿರೂಪಿಸಿದ್ದಾರೆ.
ಈ ಆರಾಧ್ಯ ಕ್ಷಣದ ವಿಡಿಯೋಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟ್ಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸಾವಿರಾರು ವೀಕ್ಷಕರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಇದು ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದೆ.
42 ವರ್ಷದ ರೆಬೆಕಾ ಶುಲ್ಡ್ ತನ್ನ ಮಾತೃತ್ವ ರಜೆ ಮುಗಿದ ನಂತರ ಕೋವಿಡ್-ಸಂಬಂಧಿತ ನಿರ್ಬಂಧಗಳಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುವಾಗ, ಚಾನೆಲ್‌ಗಾಗಿ ಹವಾಮಾನ ವರದಿಯನ್ನು ಪ್ರಸ್ತುತಪಡಿಸಲು ಮುಂದಾದಾಗ ನಿದ್ದೆ ಮಾಡುತ್ತಿದ್ದ ಮಗು ಎಚ್ಚರಗೊಂಡಿದೆ. ಹೀಗಾಗಿ ತನ್ನ ಪುಟ್ಟ ಕಂದನನ್ನು ಹಿಡಿದುಕೊಂಡು ಹವಾಮಾನ ವರದಿಯನ್ನು ಪ್ರಸ್ತುತಪಡಿಸಿದ್ದಾರೆ.