ನಂದಿನಿ, ಹಾಲು ಹಾಗೂ ಹಾಲಿನ ಇನ್ನಿತರ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಇದೀಗ ಇನ್ನಷ್ಟು ಹಲವು ಬಗೆಯ ತಿಂಡಿ-ತಿನಿಸು ಹಾಗೂ ಆಹಾರದ ರೂಪದಲ್ಲಿ ಬದಲಾಗಲು ಇದೇ ನಂದಿನಿ ಮುಂದಾಗಿದೆ.
ರೈತರಿಗೆ ಹೆಚ್ಚಿನ ಲಾಭ ತಂದು ಕೊಡುವ ನಿಟ್ಟಿನಲ್ಲಿ ಹಲವು ಹೊಸ ಕಾರ್ಯಗಳಿಗೆ ಕೆಎಂಎಫ್ ಮುಂದಾಗಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದಿಂದ ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ, ಪೆಪ್ಪರ್, ಚಾಕೊ, ಕೇಸರ್, ಸೋಯಾ, ಬಾದಾಮ್ ಮಿಲ್ಕ್, ಕಾರಾಮೆಲ್, ಬನಾನ, ಮ್ಯಾಂಗೋ ಸೇರಿದಂತೆ 19 ವಿವಿಧ ರುಚಿಗಳುಳ್ಳ ಹಾಲಿನ ಪೆಟ್ ಬಾಟಲ್ ಗಳ ರೂಪದಲ್ಲಿ ಬರಲಿವೆ. 12 ರೀತಿಯ ಚಾಕೊಲೇಟ್ ಸೇರಿದಂತೆ ಪಿಜ್ಜಾ ತಯಾರಿಸಲು ಕೂಡ ಕೆಎಂಎಫ್ ಸಿದ್ಧತೆ ನಡೆಸಿದೆ.
ಇತ್ತೀಚಿನ ಜನರು ಪಿಜ್ಜಾ ಸೇರಿದಂತೆ ಚಾಕೊಲೇಟ್ ನತ್ತ ಹೆಚ್ಚು ಆಕರ್ಷಿತರಾಗಿರುತ್ತಾರೆ. ಈ ನಿಟ್ಟಿನಲ್ಲಿ ನಂದಿನಿಯೂ ಎಲ್ಲರ ಸ್ನೇಹಿಯಾಗಲು ಪ್ರಯತ್ನಿಸುತ್ತಿದೆ.
ಈ ಆಹಾರಗಳ ತಯಾರಿಕೆಗೆ ಎಲ್ಲ ತಯಾರಿ ನಡೆದಿದ್ದು, ಫೆ. 14ರ ಹೊತ್ತಿಗೆ ಇವುಗಳು ಮಾರುಕಟ್ಟೆಗೆ ಕಾಲಿಡಲಿವೆ. ಇನ್ನು ಪಿಜ್ಜಾ ಈ ವರ್ಷದ ಅಂತ್ಯದ ವೇಳೆಗೆ ನಂದಿನಿ ಹೆಸರಿನಿಂದ ಮಾರುಕಟ್ಟೆಗೆ ಬರಲಿದೆ.