alex Certify ಪಿಎಸ್ಐ ನೇಮಕಾತಿ ಆಡಿಯೋ ವೈರಲ್; ಮಾಧ್ಯಮಗಳು ತಿರುಚಿವೆ ಎಂದ ನಿವೃತ್ತ PC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಸ್ಐ ನೇಮಕಾತಿ ಆಡಿಯೋ ವೈರಲ್; ಮಾಧ್ಯಮಗಳು ತಿರುಚಿವೆ ಎಂದ ನಿವೃತ್ತ PC

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈಗಾಗಲೇ ಐಪಿಎಸ್ ಅಧಿಕಾರಿ ಸೇರಿದಂತೆ ಅನೇಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮತ್ತೊಂದು ಆಡಿಯೋ ವೈರಲ್ ಆಗಿದೆ.

ಹೌದು, ಇತ್ತೀಚೆಗಷ್ಟೆ ಕೊಪ್ಪಳದಲ್ಲಿ ಶಾಸಕ ಬಸವರಾಜ ದಡೇಸಗೂರು ಹಾಗೂ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಪರಸಪ್ಪ ನಡುವಿನ ಆಡಿಯೋ ಒಂದು ವೈರಲ್ ಆಗಿತ್ತು. ಮಗನ ಪಿಎಸ್ಐ ಪೋಸ್ಟ್ ಗಾಗಿ ನಾವು ನೀಡಿದ್ದ 15 ಲಕ್ಷ ಹಣ ವಾಪಸ್ ನೀಡಿ ಎಂದು ಪರಿಪರಿಯಾಗಿ ಆ ಆಡಿಯೋದಲ್ಲಿ ಪರಸಪ್ಪ ಬೇಡಿಕೊಂಡಿದ್ದರು. ಇದರ ಬೆನ್ನಲ್ಲೇ ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಕೂಡ ಹೇಳಿದ್ದರು.

ಆದರೆ ಇದೀಗ ಈ ಆಡಿಯೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ತಾ ಇದೆ. ಈ ಆಡಿಯೋ ಕುರಿತಂತೆ ಪರಸಪ್ಪ ಉಲ್ಟಾ ಹೊಡೆದಿದ್ದಾರೆ. ಮಾಧ್ಯಮದಲ್ಲಿ ಈ ಬಗ್ಗೆ ವರದಿ ಪ್ರಸಾರವಾಗುತ್ತಲೆ ಕಣ್ಮರೆಯಾಗಿದ್ದ ಪರಸಪ್ಪ ಇದೀಗ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋದಲ್ಲಿ ದಡೇಸಗೂರು ಪರವಾಗಿ ಪರಸಪ್ಪ ಮಾತನಾಡಿದ್ದಾರೆ.

ಶಾಸಕ ದಡೇಸಗೂರು ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ಕಾರಟಗಿ ಪುರಸಭೆ ಸದಸ್ಯ ಆನಂದ್ ಎಂ ಹಾಗೂ ನನ್ನ ನಡುವೆ ಹಣಕಾಸಿನ ವ್ಯವಹಾರ ಇತ್ತು. ನಮ್ಮಿಬ್ಬರ ನಡುವೆ ವೈಮನಸ್ಸು ಇತ್ತು. ಇದನ್ನು ಬಗೆಹರಿಸಲು ಶಾಸಕ ದಡೇಸಗೂರು ಅವರ ಬಳಿ ಹೋಗಿದ್ದೆವು. ಅವರು ಬಗೆಹರಿಸಿಕೊಡುವುದಾಗಿ ಹೇಳಿದ್ದರು. ಆದರೆ ಅದು ಸ್ವಲ್ಪ ವಿಳಂಬವಾಗಿತ್ತು. ಈಗ ಆನಂದಪ್ಪ ಹಾಗೂ ನಮ್ಮ‌ ವ್ಯವಹಾರವನ್ನು ಹಿರಿಯರು ಬಗೆಹರಿಸಿದ್ದಾರೆ ಎಂದು ಪರಸಪ್ಪ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...