alex Certify ಪಾಸ್ಪೋರ್ಟ್ ಪಡೆಯುವುದು ಇನ್ಮುಂದೆ ಮತ್ತಷ್ಟು ಸಲೀಸು…! ಇಂದಿನಿಂದಲೇ ಹೊಸ ನಿಯಮ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಸ್ಪೋರ್ಟ್ ಪಡೆಯುವುದು ಇನ್ಮುಂದೆ ಮತ್ತಷ್ಟು ಸಲೀಸು…! ಇಂದಿನಿಂದಲೇ ಹೊಸ ನಿಯಮ ಜಾರಿ

ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಈಗಾಗಲೇ ಬಹಳಷ್ಟು ಸಡಿಲಗೊಳಿಸಿದೆ. ಇದರಿಂದಾಗಿ ಪಾಸ್ಪೋರ್ಟ್ ಪಡೆಯಲು ಅನಗತ್ಯವಾಗಿ ಆಗುತ್ತಿದ್ದ ವಿಳಂಬ ತಪ್ಪಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿದೆ.

ಇದೀಗ ಈ ಪ್ರಕ್ರಿಯೆಯನ್ನು ಮತ್ತಷ್ಟು ಸಲೀಸುಗೊಳಿಸುತ್ತಿದ್ದು, ಹೊಸ ನಿಯಮ ಸೆಪ್ಟೆಂಬರ್ 28ರ ಇಂದಿನಿಂದಲೇ ಜಾರಿಗೆ ಬರುತ್ತಿದೆ. ಪಾಸ್ಪೋರ್ಟ್ ಪಡೆಯುವಾಗ ಪೊಲೀಸ್ ವೆರಿಫಿಕೇಶನ್ ಅತಿ ಮುಖ್ಯ ಪ್ರಕ್ರಿಯೆಯಾಗಿದ್ದು ಇದನ್ನು ಈಗ ಆನ್ಲೈನ್ ಮೂಲಕವೇ ಪೂರ್ಣಗೊಳಿಸಬಹುದಾಗಿದೆ.

ಈ ಮೊದಲು ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವೇಳೆ ಅರ್ಜಿದಾರನ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರ ಹಿನ್ನೆಲೆ ಅವರ ವಿರುದ್ಧ ಯಾವುದಾದರೂ ಪ್ರಕರಣ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದರು. ಇದರಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು.

ಇದೀಗ ಆನ್ಲೈನ್ ಮೂಲಕ ಪೊಲೀಸ್ ವೆರಿಫಿಕೇಶನ್ ಅವಕಾಶವನ್ನು ವಿದೇಶಾಂಗ ಸಚಿವಾಲಯ ಕಲ್ಪಿಸಿಕೊಟ್ಟಿದ್ದು, ಇದಕ್ಕೆ ಅಂಚೆ ಕಚೇರಿಯ ಪಾಸ್ಪೋರ್ಟ್ ಸೇವಾ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...