ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು.
ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು ವೈರಲ್ ಅಗಿದ್ದು, ಖುದ್ದು ಪಾರ್ಲೆಜಿ ತಯಾರಿಕರೇ ಅಚ್ಚರಿ ಪಟ್ಟುಕೊಳ್ಳುವಂತಿದೆ.
ಟ್ವಿಟ್ಟರ್ನಲ್ಲಿ ‘ಪಾರ್ಲೆ ಜಿ ಬಿಸ್ಕತ್ ಕಾ ಲಡ್ಡು’ ಎಂಬ ಖಾದ್ಯ ವೈರಲ್ ಆಗಿದ್ದು, ಜನರು ಬಾಯಿ ಚಪ್ಪರಿಸುತ್ತಿದ್ದಾರೆ. ಟ್ವಿಟರ್ನಲ್ಲಿ ಸಂಪೂರ್ಣ ಪಾಕವಿಧಾನವನ್ನು ತಿಳಿಸಲಾಗಿದ್ದು, ಇದು ಬಹಳ ನೆಟ್ಟಿಗರ ಮನ ಗೆದ್ದಿದೆ.
ಟ್ವೀಟ್ಗೆ ‘ಹಲ್ವಾ’ ಎಂದು ಶೀರ್ಷಿಕೆ ನೀಡಲಾಗಿದ್ದರೂ, ಇದು ಲಡ್ಡುವಿನ ರೀತಿ ಕಾಣಿಸುತ್ತದೆ, ವಿಡಿಯೋದಲ್ಲಿ ಬಿಸ್ಕತ್ತನ್ನು ತುಂಡುಗಳಾಗಿ ಒಡೆದು, ತದನಂತರ ತಿನಿಸು ತಯಾರಿಸುವುದನ್ನು ನೋಡಬಹುದಾಗಿದೆ. ಈ ಹೊಸ ರುಚಿಗೆ ನೆಟ್ಟಿಗರು ಮನಸೋತಿದ್ದು, ತಾವೂ ಅದನ್ನು ಟ್ರೈ ಮಾಡುವುದಾಗಿ ಹೇಳಿದ್ದಾರೆ.