alex Certify ಪಾಕ್ ವೇಗಿಗೆ ಉಡುಗೊರೆ ಕಳುಹಿಸಿದ ಎಂ.ಎಸ್.ಧೋನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ವೇಗಿಗೆ ಉಡುಗೊರೆ ಕಳುಹಿಸಿದ ಎಂ.ಎಸ್.ಧೋನಿ….!

ಭಾರತದಿಂದ ನೆರೆಯ ಪಾಕಿಸ್ತಾನಕ್ಕೆ ತಲುಪಿತು ಅದ್ಭುತ ಉಡುಗೊರೆ. ಅಷ್ಟಕ್ಕೂ ಆ ಉಡುಗೊರೆ ಕಳುಹಿಸಿದ್ದು ಯಾರು ಗೊತ್ತಾ..? ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ. ಹೌದು, ಪಾಕ್ ವೇಗಿ ಹ್ಯಾರಿಸ್ ರೌಫ್ ಅವರಿಗೆ ಧೋನಿ ಸುಂದರವಾದ ಉಡುಗೊರೆಯನ್ನು ಕಳುಹಿಸಿದ್ದಾರೆ.

ಸುಂದರವಾದ ಉಡುಗೊರೆ ಸ್ವೀಕರಿಸಿದ ಹ್ಯಾರಿಸ್ ರೌಫ್ ಅವರು ತಮ್ಮ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನ ನಂಬರ್ 7 ಜೆರ್ಸಿಯನ್ನು ಧೋನಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹ್ಯಾರಿಸ್ ಬಹಿರಂಗಪಡಿಸಿದ್ದಾರೆ. ಈ ಉಡುಗೊರೆಗಾಗಿ ಅವರು ಧೋನಿ ಮತ್ತು ಸಿಎಸ್‌ಕೆ ತಂಡದ ಮ್ಯಾನೇಜರ್‌ಗೆ ಧನ್ಯವಾದ ಹೇಳಿದ್ದಾರೆ. ಬಹಳ ಸಿಂಪಲ್ ವ್ಯಕ್ತಿತ್ವದ ಧೋನಿಯು ತಮ್ಮ ಸದ್ಭಾವನೆಯ ಮೂಲಕ ಹಲವಾರು ಜನರ ಹೃದಯ ಗೆದ್ದಿದ್ದಾರೆ ಎಂದು ಹ್ಯಾರಿಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಪಾಕ್ ನ ಹ್ಯಾರಿಸ್ ರೌಫ್‌ಗೆ ಧೋನಿ ವಿರುದ್ಧ ಆಡಲು ಎಂದಿಗೂ ಅವಕಾಶ ಸಿಗಲಿಲ್ಲ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಧೋನಿ, ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ತಂಡದ ಪರ ಆಡುತ್ತಿದ್ದಾರೆ.

ಹ್ಯಾರಿಸ್ ರೌಫ್ ಪ್ರಸ್ತುತ ಬಿಗ್ ಬ್ಯಾಷ್ ಲೀಗ್ ನ ಪ್ರಸ್ತುತ ಋತುವಿಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿ ಅವರು ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. 28ರ ಹರೆಯದ ರೌಫ್, ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್ ಪಡೆದಿದ್ದಾರೆ.

— Haris Rauf (@HarisRauf14) January 7, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...