
ಸುಂದರವಾದ ಉಡುಗೊರೆ ಸ್ವೀಕರಿಸಿದ ಹ್ಯಾರಿಸ್ ರೌಫ್ ಅವರು ತಮ್ಮ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನ ನಂಬರ್ 7 ಜೆರ್ಸಿಯನ್ನು ಧೋನಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹ್ಯಾರಿಸ್ ಬಹಿರಂಗಪಡಿಸಿದ್ದಾರೆ. ಈ ಉಡುಗೊರೆಗಾಗಿ ಅವರು ಧೋನಿ ಮತ್ತು ಸಿಎಸ್‌ಕೆ ತಂಡದ ಮ್ಯಾನೇಜರ್‌ಗೆ ಧನ್ಯವಾದ ಹೇಳಿದ್ದಾರೆ. ಬಹಳ ಸಿಂಪಲ್ ವ್ಯಕ್ತಿತ್ವದ ಧೋನಿಯು ತಮ್ಮ ಸದ್ಭಾವನೆಯ ಮೂಲಕ ಹಲವಾರು ಜನರ ಹೃದಯ ಗೆದ್ದಿದ್ದಾರೆ ಎಂದು ಹ್ಯಾರಿಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಪಾಕ್ ನ ಹ್ಯಾರಿಸ್ ರೌಫ್‌ಗೆ ಧೋನಿ ವಿರುದ್ಧ ಆಡಲು ಎಂದಿಗೂ ಅವಕಾಶ ಸಿಗಲಿಲ್ಲ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಧೋನಿ, ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ತಂಡದ ಪರ ಆಡುತ್ತಿದ್ದಾರೆ.
ಹ್ಯಾರಿಸ್ ರೌಫ್ ಪ್ರಸ್ತುತ ಬಿಗ್ ಬ್ಯಾಷ್ ಲೀಗ್ ನ ಪ್ರಸ್ತುತ ಋತುವಿಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ. ಅಲ್ಲಿ ಅವರು ಮೆಲ್ಬೋರ್ನ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದಾರೆ. 28ರ ಹರೆಯದ ರೌಫ್, ಇಲ್ಲಿಯವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್ ಪಡೆದಿದ್ದಾರೆ.