alex Certify ಪಾಕಿಸ್ತಾನದ ವೇಗಿಯ ವಿಡಿಯೋ ಜೊತೆಗೆ ರೊಮ್ಯಾಂಟಿಕ್‌ ರೀಲ್‌ ಮಾಡಿ ಟ್ರೋಲ್‌ಗೆ ತುತ್ತಾದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ವೇಗಿಯ ವಿಡಿಯೋ ಜೊತೆಗೆ ರೊಮ್ಯಾಂಟಿಕ್‌ ರೀಲ್‌ ಮಾಡಿ ಟ್ರೋಲ್‌ಗೆ ತುತ್ತಾದ ನಟಿ

ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಜೊತೆಗಿನ ಜಟಾಪಟಿ ಬಳಿಕ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ನಡೆದ ಎರಡೂ ಪಂದ್ಯಗಳನ್ನು ವೀಕ್ಷಿಸಲು ಊರ್ವಶಿ ಬಂದಿದ್ದರು.

ಇದೀಗ ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ವಿಡಿಯೋಗಳನ್ನು ಬಳಸಿಕೊಂಡು ಊರ್ವಶಿ, ರೊಮ್ಯಾಂಟಿಕ್ ಆಗಿರೋ ಇನ್‌ಸ್ಟಾಗ್ರಾಮ್ ರೀಲ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ರೀಲ್‌ ನೋಡಿದ ನೆಟ್ಟಿಗರು ಊರ್ವಶಿಗೆ ಸಿಕ್ಕಾಪಟ್ಟೆ ಟ್ರೋಲ್‌ ಮಾಡ್ತಿದ್ದಾರೆ. ರೀಲ್‌ ಕೂಡ ಸಾಕಷ್ಟು ವೈರಲ್‌ ಆಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡು ನಾಚಿಕೆಪಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ರೀಲ್‌ ನೋಡಿದ ಅಭಿಮಾನಿಗಳು ಊರ್ವಶಿ ರೌಟೇಲಾ ಹಾಗೂ ನಸೀಮ್‌ ಶಾ ಪೋಟೋಗಳನ್ನು ಇಟ್ಕೊಂಡು ಭಿನ್ನ ವಿಭಿನ್ನ ರೀಲ್‌ಗಳನ್ನು ಸೃಷ್ಟಿಸಿದ್ದಾರೆ. ಸಾಕಷ್ಟು ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ಸಹ ಬಂದಿವೆ. ಭಾನುವಾರ ದುಬೈ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಮ್ಯಾಚ್‌ ನಡೆಯುತ್ತಿತ್ತು. ಮ್ಯಾಚ್‌ ನೋಡಲು ಬಂದಿದ್ದ ಊರ್ವಶಿ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು.

ಉರ್ವಶಿ ರೌಟೇಲಾ ಹಾಗೂ ರಿಷಭ್‌ ಪಂತ್‌ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋ ವದಂತಿ ಈ ಹಿಂದೆಯೇ ಶುರುವಾಗಿತ್ತು. ಆದ್ರೆ ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು ಅಂತಾ ರಿಷಭ್‌ ಪಂತ್‌ ರಿಕ್ವೆಸ್ಟ್‌ ಮಾಡಿಕೊಂಡಿದ್ರು. ಊರ್ವಶಿಯನ್ನು ಅಕ್ಕ ಅಂತಾನೂ ಕರೆದಿದ್ರು. ಇನ್ನು ಪಾಕ್‌ನ ಯುವ ಬೌಲರ್‌ ನಸೀಮ್‌ ಶಾ, ಏಷ್ಯಾ ಕಪ್‌ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಲಯಬದ್ಧವಾದ ಬೌಲಿಂಗ್‌ ಮೂಲಕ ಕ್ರಿಕೆಟ್‌ ಪ್ರಿಯರ ಮೆಚ್ಚುಗೆಯನ್ನೂ ಗಳಿಸಿದ್ದಾರೆ. ಪಾಕ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದು, ಎರಡನೇ ಪಂದ್ಯವನ್ನು ಬಾಬರ್‌ ಅಜಮ್‌ ಪಡೆ ಗೆದ್ದುಕೊಂಡಿದೆ. ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಸೋತ ಬಳಿಕ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...