
ಮಹಿಳೆಯೊಬ್ಬಳು ನಡೆದುಕೊಂಡು ಹೋಗುವಾಗ ಪರ್ವತ ಸಿಂಹ ಆಕೆಯ ಮೇಲೆ ದಾಳಿ ಎಸಗಿರೋ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ನಡೆದಿದೆ. ಈ ವೇಳೆ ಆಕೆಯ ಜೊತೆಗಿದ್ದ ಸಾಕು ನಾಯಿ ತನ್ನ ಮಾಲೀಕಳನ್ನು ರಕ್ಷಿಸುವ ಸಲುವಾಗಿ ಪರ್ವತ ಸಿಂಹದ ಎದುರು ನಿಂತು ಕಾದಾಡಿ, ಆಕೆಯನ್ನು ರಕ್ಷಿಸಿದೆ.
ಉತ್ತರ ಕ್ಯಾಲಿಫೋರ್ನಿಯಾದ ಟ್ರಿನಿಟಿ ನದಿಯ ಬಳಿ ಎರಿನ್ ವಿಲ್ಸನ್ ತನ್ನ ಸಾಕು ನಾಯಿ ಜೊತೆ ಅಡ್ಡಾಡುತ್ತಿದ್ದಳು. ಈ ವೇಳೆ ಪರ್ವತ ಸಿಂಹವು ಆಕೆಯ ಮೇಲೆ ದಾಳಿ ಮಾಡಿದೆ. ಈ ವೇಳೆ ಆಕೆ ಭೀತಿಯಿಂದ ಕಿರುಚಿದ್ದಾಳೆ. ಶೀಘ್ರದಲ್ಲೇ ಪರ್ವತ ಸಿಂಹವನ್ನು ನೋಡಿದ ಶ್ವಾನ ಅದರ ಮೇಲೆ ಮುಗಿಬಿದ್ದಿದೆ. ಘಟನೆಯಿಂದ ನಾಯಿ ತೀವ್ರವಾಗಿ ಗಾಯಗೊಂಡಿದೆ. ಶ್ವಾನಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ. ತನ್ನ ಶ್ವಾನವು ತನ್ನ ಪ್ರಾಣವನ್ನು ಹೇಗೆ ರಕ್ಷಿಸಿತು ಎಂಬುದನ್ನು ಮಹಿಳೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ನೆಟ್ಟಿಗರು ಶ್ವಾನದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಹೇಳೋದು ಅಲ್ವಾ ನಾಯಿಗಳಿಗಿರುವ ಸ್ವಾಮಿನಿಷ್ಠೆ ಮಾನವರಿಗೆ ಇರುವುದಿಲ್ಲವೆಂದು..
https://twitter.com/dog_rates/status/1527418860386648064?ref_src=twsrc%5Etfw%7Ctwcamp%5Etweetembed%7Ctwterm%5E1527418860386648064%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdog-fights-off-mountain-lion-to-save-owner-in-northern-california-see-viral-post-1952394-2022-05-21