
ಯುಕೆಯಲ್ಲಿ ಆರ್ವೆನ್ ಚಂಡಮಾರುತವು ವಿನಾಶವನ್ನು ಉಂಟುಮಾಡಿದಾಗ ಕೆಲವು ದಿನಗಳವರೆಗೆ ವಿದ್ಯುತ್ ಇಲ್ಲದೆ ಗರೆಥ್ ಹ್ಯೂಸ್ ಜೀವನ ನಡೆಸಿದ್ದರು. ಇದಕ್ಕಾಗಿ ಆತ ಇಂಧನ ಪೂರೈಕೆದಾರರಿಂದ ಪರಿಹಾರ ನಿರೀಕ್ಷಿಸುತ್ತಿದ್ದ. ಆದರೆ ಆತನಿಗೆ 2 ಟ್ರಿಲಿಯನ್ ಪೌಂಡ್‌ಗಳ ಪರಿಹಾರದ ಚೆಕ್ ಅನ್ನು ಕಳುಹಿಸಿದಾಗ ದಿಗ್ಭ್ರಮೆಗೊಂಡಿದ್ದಾನೆ.
ಗರೆಥ್ ಹ್ಯೂಸ್ಗೆ, ನಾರ್ದರ್ನ್ ಪವರ್‌ಗ್ರಿಡ್ ಅವರಿಂದ ಕಳುಹಿಸಲಾದ ಚೆಕ್‌ನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಇಂಧನ ಪೂರೈಕೆದಾರರಿಂದ ತಪ್ಪಾದ ಚೆಕ್‌ಗಳನ್ನು ಪಡೆದಿದ್ದು ಹ್ಯೂಸ್ ಮಾತ್ರವಲ್ಲ, ಸುಮಾರು 75 ಮಂದಿಗೆ ಅದು ತಪ್ಪಾಗಿ ಚೆಕ್ ಗಳನ್ನು ಕಳುಹಿಸಿ ನಂತರ ಕ್ಷಮೆಯಾಚಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಪವರ್‌ಗ್ರಿಡ್ ಟ್ವೀಟ್‌ಗೆ ಪ್ರತ್ಯುತ್ತರಿಸಿದ್ದು, ತಪ್ಪನ್ನು ಎತ್ತಿ ತೋರಿಸಿದ್ದಕ್ಕಾಗಿ ಹ್ಯೂಸ್‌ಗೆ ಧನ್ಯವಾದ ತಿಳಿಸಿದೆ.