alex Certify ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಒಂದೇ ದಿನ ಸಾವನ್ನಪ್ಪಿದ ಅವಳಿ ಸಹೋದರರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಒಂದೇ ದಿನ ಸಾವನ್ನಪ್ಪಿದ ಅವಳಿ ಸಹೋದರರು…!

ಪರಸ್ಪರ 900 ಕಿ.ಮೀ. ಅಂತರದಲ್ಲಿದ್ದರೂ ಸಹ ಅವಳಿ ಸಹೋದರರಿಬ್ಬರೂ ಒಂದೇ ದಿನ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

26 ವರ್ಷದ ಈ ಅವಳಿ ಸಹೋದರರು ರಾಜಸ್ಥಾನದ ಬಾಡಮೇರ್ ಮೂಲದವರಾಗಿದ್ದು ಸುಮೇರ್ ಸಿಂಗ್ ಎಂಬವರು ಸೂರತ್ ನಲ್ಲಿದ್ದು, ಅವರ ಸಹೋದರ ಸೋಹನ್ ಸಿಂಗ್ ಜೈಪುರದಲ್ಲಿ ವಾಸಿಸುತ್ತಿದ್ದರು.

ಸೂರತ್ ನಲ್ಲಿ ವಾಸಿಸುತ್ತಿದ್ದ ಸುಮೇರ್ ಸಿಂಗ್ ಮನೆಯ ತಾರಸಿ ಮೇಲೆ ಫೋನಿನಲ್ಲಿ ಮಾತನಾಡುವಾಗ ಆಯತಪ್ಪಿ ಮೃತಪಟ್ಟಿದ್ದರು. ಈ ವಿಷಯ ತಿಳಿದು ಮನೆಗೆ ಬಂದಿದ್ದ ಸೋಹನ್ ಸಿಂಗ್ ಕೂಡ ಕಾಲು ಜಾರಿ ನೀರಿನ ಟ್ಯಾಂಕಿಗೆ ಬಿದ್ದು ಮೃತಪಟ್ಟಿದ್ದಾರೆ. ಆದರೆ ಸೋಹನ್ ಸಿಂಗ್ ಅವರ ಸಾವು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...