ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆಶಿಕಾ ರಂಗನಾಥ್ ಇದೀಗ ಕೃತಿ ಸನೊನ್ ಅವರ ಸೂಪರ್ ಡೂಪರ್ ಹಿಟ್ ‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋವನ್ನು ಆಶಿಕಾ ರಂಗನಾಥ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಈ ವಿಡಿಯೋಗೇ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
‘ಪುಷ್ಪ’ ಚಿತ್ರದ ಖಳನಾಯಕನ ಫಸ್ಟ್ ಲುಕ್ ರಿಲೀಸ್
ಸಿನಿಮಾ ವಿಚಾರಕ್ಕೆ ಬಂದರೆ ಆಶಿಕಾ ರಂಗನಾಥ್ ಅಭಿನಯಿಸಿರುವ ‘ಮದಗಜ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.’ಮದಗಜ’ ಚಿತ್ರದ ಆಶಿಕಾ ರಂಗನಾಥ್ ಅವರ ಎರಡು ಲುಕ್ ಗಳು ಈಗಾಗಲೇ ಬಿಡುಗಡೆಯಾಗಿದ್ದು ಒಂದರಲ್ಲಿ ಹಳ್ಳಿಹುಡುಗಿಯಾಗಿ ಕಾಣಿಸಿಕೊಂಡಿದ್ದು, ಇನ್ನೊಂದು ಲುಕ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ‘ರೆಮೋ’, ‘ಗರುಡ’ ಹಾಗೂ ‘ಅವತಾರ ಪುರುಷ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ.
https://www.youtube.com/watch?v=bPChkp44ZM4&feature=youtu.be