alex Certify ‘ಪದ್ಮಶ್ರೀ’ ಪುರಸ್ಕೃತ ಉದ್ಯಮಿಗೆ ಕುಟುಂಬಸ್ಥರಿಂದ ಹೆಲಿಕ್ಯಾಪ್ಟರ್ ಉಡುಗೊರೆ…! ನಿಬ್ಬೆರಗಾಗಿಸುತ್ತೆ ಅವರು ಮಾಡಿದ ಉಪಯುಕ್ತ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪದ್ಮಶ್ರೀ’ ಪುರಸ್ಕೃತ ಉದ್ಯಮಿಗೆ ಕುಟುಂಬಸ್ಥರಿಂದ ಹೆಲಿಕ್ಯಾಪ್ಟರ್ ಉಡುಗೊರೆ…! ನಿಬ್ಬೆರಗಾಗಿಸುತ್ತೆ ಅವರು ಮಾಡಿದ ಉಪಯುಕ್ತ ಕಾರ್ಯ

ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಗುಜರಾತ್​ನ ವಜ್ರದ ಉದ್ಯಮಿ ಹಾಗೂ ಬಿಲಿಯೇನರ್​​ ಸಾವ್ಜಿ ದೋಲಾಕಿಯಾರಿಗೆ ಕುಟುಂಬಸ್ಥರು ಹೊಚ್ಚ ಹೊಸ ಹೆಲಿಕಾಪ್ಟರ್​ನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು.

ದೋಲಾಕಿಯಾ ಸಹೋದರರಾದ ಹಿಮ್ಮತ್​ಭಾಯ್​ ದೋಲಾಕಿಯಾ, ತುಳಸಿಬಾಯಿ ದೋಲಾಕಿಯಾ ಹಾಗೂ ಘನ್​ಶ್ಯಾಮಬಾಯಿ ದೋಲಾಕಿಯಾ ಅವರ ಎಂಟು ಮಕ್ಕಳು ಸೇರಿದಂತೆ ಎಲ್ಲಾ ಕುಟುಂಬಸ್ಥರು ಸಾವ್ಜಿ ಸಾಧನೆಯನ್ನು ಅಭಿನಂದಿಸಲು ಹೆಲಿಕಾಪ್ಟರ್​ ನೀಡುತ್ತಿರುವ ಬಗ್ಗೆ ಇದೇ ಫೆಬ್ರವರಿ 1ರಂದು ಆಶ್ಚರ್ಯಕರ ಘೋಷಣೆಯನ್ನು ಮಾಡಿದ್ದರು.

ಕುಟುಂಬಸ್ಥರು ನೀಡಿರುವ ಈ 50 ಕೋಟಿ ರೂಪಾಯಿ ಮೌಲ್ಯದ ಹೊಚ್ಚ ಹೊಸ ಹೆಲಿಕಾಪ್ಟರ್​ನ್ನು ಕೇವಲ ವೈಯಕ್ತಿಕ ಬಳಕೆಗೆ ಇಟ್ಟುಕೊಳ್ಳಲು ಮನಸ್ಸು ಮಾಡದ ಸಾವ್ಜಿ ದೋಲಾಕಿಯಾ ಸೂರತ್​ನ ಜನರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಬಳಕೆ ಮಾಡಲು ದಾನ ಮಾಡಿದ್ದಾರೆ.

ಸಾವ್ಜಿ ಅನೇಕ ಸಮಯಗಳಿಂದ ಸೂರತ್​ ಜನರ ತುರ್ತು ಬಳಕೆಗೆ ಹೆಲಿಕಾಪ್ಟರ್​ನ್ನು ಉಡುಗೊರೆಯಾಗಿ ನೀಡಲು ಯೋಚಿಸಿದ್ದರು. ಕುಟುಂಬಸ್ಥರು ಹೆಲಿಕಾಪ್ಟರ್​ ನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದಾರೆ ಎಂದು ತಿಳಿದ ತಕ್ಷಣವೇ ತಮ್ಮ ನಿರ್ಧಾರವನ್ನು ತ್ವರಿತವಾಗಿ ಘೋಷಿಸಿದ್ದಾರೆ.

ನನ್ನ ಕುಟುಂಬಸ್ಥರು ಇಂತಹದ್ದೊಂದು ದುಬಾರಿ ಉಡುಗೊರೆಯನ್ನು ನನಗೆ ನೀಡಬಹುದು ಎಂದು ನಾನು ಊಹಿಸಿಯೂ ಇರಲಿಲ್ಲ. ನನ್ನ ಕುಟುಂಬದವರು ನೀಡಿದ ಉಡುಗೊರೆಯನ್ನು ನಿರಾಕರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಈ ಉಡುಗೊರೆಯನ್ನು ನಾವು ಸಾರ್ವಜನಿಕ ಸೇವೆಗೆ ಬಳಕೆ ಮಾಡಲು ಇಚ್ಛಿಸುತ್ತೇನೆ ಎಂದು ಸಾವ್ಜಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...