alex Certify ಪತ್ರಕರ್ತ ಹಾಗೂ ಪೊಲೀಸರ ಸೋಗಿನಲ್ಲಿ ವಂಚಿಸುತ್ತಿದ್ದ ಹೋಮ್​ ಗಾರ್ಡ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಕರ್ತ ಹಾಗೂ ಪೊಲೀಸರ ಸೋಗಿನಲ್ಲಿ ವಂಚಿಸುತ್ತಿದ್ದ ಹೋಮ್​ ಗಾರ್ಡ್ ಅರೆಸ್ಟ್

ರಿಪೋರ್ಟರ್​ಗಳ ಸೋಗಿನಲ್ಲಿ ಸುಲಿಗೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ವರು ಹೋಮ್​ ಗಾರ್ಡ್ಸ್​​ ಹಾಗೂ ಓರ್ವ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.‌

ಮಾಧ್ಯಮಗಳಲ್ಲಿ ವರದಿಗಾರ ಎಂದು ಹೇಳಿಕೊಂಡ ಆರ್‌ಟಿ ನಗರದ ನಿವಾಸಿ ಸೈಯದ್ ಕಲೀಂ (28) ಮತ್ತು ನಾಲ್ವರು ಹೋಮ್​ ಗಾರ್ಡ್​ಗಳಾದ ಸಂಪಂಗಿರಾಮ್ (31), ಆಸಿಫ್ ಬಾಬುಜಾನ್ (27), ಆನಂದ್ ರಾಜ್ (30) ಮತ್ತು ವಿನಾಯಕ (28) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್​ ಅಧಿಕಾರಿಗಳು ಎಂದು ಹೇಳಿಕೊಂಡು ಸ್ಪಾ ಒಂದರ ಮೇಲೆ ದಾಳಿ ನಡೆಸಿ ಹಣ ದೋಚಿದ ಬಗ್ಗೆ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ ಬಳಿಕ ಈ ದಂಧೆ ಬೆಳಕಿಗೆ ಬಂದಿದೆ.

ಸ್ಪಾ ಮಾಲೀಕರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರ ಸೋಗಿನಲ್ಲಿ ಹೋಮ್​ಗಾರ್ಡ್​ಗಳು ಸ್ಪಾಗೆ ನುಗ್ಗಿದ್ದಾರೆ. ಪತ್ರಕರ್ತ ಎಂದು ಹೇಳಿಕೊಂಡ ವ್ಯಕ್ತಿಯು ಮಾಲೀಕನಿಗೆ ಬೆದರಿಕೆ ಹಾಕಿದ್ದಾನೆ. ಬಳಿಕ ಇವರಿಂದ 1.6 ಲಕ್ಷ ರೂಪಾಯಿ ದೋಚಿ ಆರೋಪಿಗಳು ಅಲ್ಲಿಂದ ತೆರಳಿದ್ದರು ಎನ್ನಲಾಗಿದೆ.

ಪೊಲೀಸರು ಎಲ್ಲಾ ಐವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಇವರ ಬ್ಯಾಂಕ್​ ಖಾತೆಯಿಂದ 60 ಸಾವಿರ ರೂಪಾಯಿ ನಗದು ಹಾಗೂ 1 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...