alex Certify ಅಭಿಮಾನಿಗಳಿಗಾಗಿ ಸುಂದರ ವಿಡಿಯೋ ಹಂಚಿಕೊಂಡ ರಾಕಿ ಭಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳಿಗಾಗಿ ಸುಂದರ ವಿಡಿಯೋ ಹಂಚಿಕೊಂಡ ರಾಕಿ ಭಾಯ್

ಕೆಜಿಎಫ್ ಚಾಪ್ಟರ್ 2 ಯಶಸ್ಸಿನಲ್ಲಿ ಮುಳುಗಿರುವ ನಟ ಯಶ್ ಬೆಂಗಳೂರಿನ ಹೊರವಲಯದಲ್ಲಿರುವ “ಪ್ರಾಣಿ” ಸಾಕುಪ್ರಾಣಿ ಸ್ಯಾಂಚುರಿಗೆ ಭೇಟಿ ನೀಡಿದರು.

ಶನಿವಾರದ ಅವರ ಪ್ರವಾಸದ ಒಂದು ನೋಟವನ್ನು ಇನ್ ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಈ ವೇಳೆ ಯಶ್ ಜೊತೆಗಿದ್ದರು.

ಯಶ್ ತಮ್ಮ ಕುಟುಂಬ ಮತ್ತು ಇತರರೊಂದಿಗೆ ಅಲ್ಲಿಗೆ ಭೇಟಿ ನೀಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪಕ್ಷಿಗಳಿಗೆ ಆಹಾರ ನೀಡುವುದು ಮತ್ತು ಪ್ರಾಣಿಗಳೊಂದಿಗೆ ಸಂವಹನ ನಡೆಸುವುದನ್ನು ಸೆರೆ ಹಿಡಿಯಲಾಗಿದೆ.

ಕೆಲವು ದೃಶ್ಯಗಳಲ್ಲಿ ಅಲ್ಲಿನ‌ ಸಿಬ್ಬಂದಿ ಮಾರ್ಗದರ್ಶನದಲ್ಲಿ ಯಶ್ ಕೈಯಲ್ಲಿ ಹಾವು ಮತ್ತು ಹಲ್ಲಿ ಸೇರಿದಂತೆ ಸರೀಸೃಪಗಳನ್ನು ಹಿಡಿದಿರುವುದು ಕಂಡುಬಂದಿದೆ.

ಈ ವಿಡಿಯೋವನ್ನು ಶೇರ್ ಮಾಡಿರುವ ಯಶ್, ತಮ್ಮ ಕುಟುಂಬಕ್ಕೆ ಇದೊಂದು ಸ್ಮರಣೀಯ ಅನುಭವ ಎಂದಿದ್ದಾರೆ. “ನಮ್ಮ ಗ್ರಹಿಕೆಯನ್ನು ಬದಲಿಸಿದ ಅನುಭವ ! ಒಂದು ಸ್ಮರಣೀಯ ದಿನ, ಮಕ್ಕಳಿಗಷ್ಟೇ ಅಲ್ಲ, ನಮಗೆಲ್ಲರಿಗೂ…… ಇಡೀ ತಂಡಕ್ಕೆ ವಂದನೆಗಳು @prani_the_pet_sanctuary ” ಎಂದು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...