ಪತ್ನಿಯ ತವರು ಮನೆಗೆ ನುಗ್ಗಿ ಬರೋಬ್ಬರಿ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ 51 ವರ್ಷದ ವ್ಯಕ್ತಿಯನ್ನು ಜೈಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿವೇಕ್ ಗುಪ್ತಾ ಎಂದು ಗುರುತಿಸಲಾಗಿದೆ, ಬಂಧಿತ ಆರೋಪಿಯು ಮಧ್ಯಪ್ರದೇಶ ಮೂಲದವರಾಗಿದ್ದು, ಜೈಪುರದ ಕರ್ಧಾನಿಯಲ್ಲಿರುವ ಸಿರ್ಸಿ ಲಿಂಕ್ ರಸ್ತೆಯಲ್ಲಿ ವಾಸವಿದ್ದ ಎನ್ನಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿಯು ಮನೆಯಲ್ಲಿದ್ದ 17 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾನೆ. ನಾವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಈ ವೇಳೆಯಲ್ಲಿ ವಿವೇಕ್ ಗುಪ್ತಾ ಮೇಲೆ ಶಂಕೆ ಮೂಡಿತ್ತು. ಬಳಿಕ ಕೂಲಂಕುಷವಾಗಿ ತನಿಖೆ ನಡೆಸಿದ್ದೇವೆ ಆಗ ವಿವೇಕ್ ಗುಪ್ತನೇ ಕಳ್ಳ ಎನ್ನುವುದು ಧೃಡಪಟ್ಟಿದೆ ಎಂದು ಪೊಲೀಸ್ ಅಧಿಕಾರಿ ವಿರೇಂದ್ರ ಕುರೇಲ್ ಹೇಳಿದರು.