alex Certify ಪತಿ ಹುಟ್ಟುಹಬ್ಬಕ್ಕೆ ಮನೆಯಲ್ಲಿ ಹೊಸ ಅತಿಥಿ ಆಗಮನವೆಂದ ನಟಿ ಪ್ರಣೀತಾ ಸುಭಾಷ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಹುಟ್ಟುಹಬ್ಬಕ್ಕೆ ಮನೆಯಲ್ಲಿ ಹೊಸ ಅತಿಥಿ ಆಗಮನವೆಂದ ನಟಿ ಪ್ರಣೀತಾ ಸುಭಾಷ್​

ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್​​ ಗುಟ್ಟು ಗುಟ್ಟಾಗಿ ಮದುವೆ ಆಗಿದ್ದು ಎಲ್ಲರಿಗೂ ತಿಳಿದಿದೆ. ಬೆಂಗಳೂರು ಮೂಲದ ಉದ್ಯಮಿಯ ಜೊತೆಯಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದ ನಟಿ ಪ್ರಣೀತಾ ಇದೀಗ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

ತಮ್ಮ ಪತಿಯ 34ನೇ ಜನ್ಮ ದಿನಕ್ಕೆ ಮನೆಗೆ ಏಂಜಲ್ಸ್​ಗಳ ಆಗಮನವಾಗಲಿದೆ ಎಂದು ನಟಿ ಪ್ರಣೀತಾ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಫೋಟೋ ಶೂಟ್​ ಮಾಡಿಸಿಕೊಳ್ಳುವ ಮೂಲಕ ತಾವು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ ನಟಿ ಪ್ರಣೀತಾ ಸುಭಾಷ್​.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿಗೆ ಅಭಿಮಾನಿಗಳು ಕಮೆಂಟ್​ ವಿಭಾಗದಲ್ಲಿ ಶುಭ ಹಾರೈಸಿದ್ದಾರೆ. ಕೊರೊನಾದ ಅಬ್ಬರದ ನಡುವೆಯೇ ನಟಿ ಪ್ರಣೀತಾ ಸುಭಾಷ್,​​ ಉದ್ಯಮಿ ನಿತಿನ್​ ರಾಜು ಎಂಬವರ ಜೊತೆಯಲ್ಲಿ ಮೇ ತಿಂಗಳಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...