ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ತನ್ನ ಗಂಡನ ಸರ್ ನೇಮ್ ತೆಗೆದು ಕೇವಲ ಪ್ರಿಯಾಂಕ ಎಂದು ಹೆಸರಿಸಿಕೊಂಡಿದ್ದು ಇಂಟರ್ ನ್ಯಾಷನಲ್ ಸುದ್ದಿಯಾಗಿತ್ತು. ಟ್ರೋಲರ್ಸ್, ಮೀಮರ್ಸ್ ಅಂತೂ ಈ ಬಗ್ಗೆ ಈ ಹಿಂದೆಯೆ ಭವಿಷ್ಯ ನುಡಿದಿದ್ದೆವು ಎಂದು ಪಿಗ್ಗಿಯನ್ನ ಟ್ರೋಲ್ ಮಾಡಿದ್ದರು. ಎಷ್ಟೇ ಸುದ್ದಿಯಾದರು ಸೈಲೆಂಟಾಗಿದ್ದ ಪ್ರಿಯಾಂಕ, ಈ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ನನ್ನ ಇನ್ಸ್ಟಾ ಯೂಸರ್ ನೇಮ್ ನನ್ನ ಟ್ವಿಟ್ಟರ್ ಖಾತೆಯ ಯೂಸರ್ ನೇಮ್ ಗೆ ಮ್ಯಾಚ್ ಆಗಲಿ ಎಂದು ನಾನು ನನ್ನ ಸರ್ ನೇಮ್ ತೆಗೆದು ಕೇವಲ ಪ್ರಿಯಾಂಕ ಎಂದು ಬರೆದುಕೊಂಡಿದ್ದೆ. ನನಗೆ ಅರ್ಥವಾಗ್ತಿಲ್ಲ, ಇದು ಅಷ್ಟು ದೊಡ್ಡ ಸಂಗತಿಯು ಅಲ್ಲಾ. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಹೆಸರು ತೆಗೆದಾಕ್ಷಣ ಸಂಬಂಧ ಮುಗಿಯೋಲ್ಲಾ. It is social media, just chill guys ಎಂದಿದ್ದಾರೆ.
33 ಹೊಸ ಯೂನಿಕಾರ್ನ್ಗಳೊಂದಿಗೆ ಬ್ರಿಟನ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದ ಭಾರತ
ಪ್ರಿಯಾಂಕ ತನ್ನ ಸರ್ ನೇಮ್ ತೆಗೆದದ್ದು ಅಷ್ಟು ದೊಡ್ಡ ಸುದ್ದಿಯಾಗೋಕೆ ಕಾರಣ ಸಮಂತಾ ಹಾಗೂ ನಾಗಚೈತನ್ಯ ಡೈವೋರ್ಸ್ ವಿಚಾರ. ವಿಚ್ಛೇದನಕ್ಕು ಮೊದಲು ಸಮಂತಾ ಅಕ್ಕಿನೇನಿ ಎಂದಿದ್ದ ಯೂಸರ್ ನೇಮ್ ಅನ್ನು ಕೇವಲ S ಎಂದು ಸಮಂತಾ ಬದಲಿಸಿಕೊಂಡಿದ್ದರು, ಹೀಗಾಗಿ ಪ್ರಿಯಾಂಕ ವಿಚಾರದಲ್ಲಿಯೂ ಹೀಗೆ ಆಗಿರಬಹುದು ಎಂದು ಊಹಿಸಿದ್ದರು. ಈ ಹಿಂದೆಯೆ ಈ ಬಗ್ಗೆ ಪ್ರಿಯಾಂಕ ತಾಯಿಮಧು ಚೋಪ್ರಾ, ಇಲ್ಲಸಲ್ಲದ ಗಾಳಿಸುದ್ದಿ ಮಾಡಬೇಡಿ ಎಂದಿದ್ದರು.